Monday, October 16, 2017

G.K Points ಭಾಗ-8 (ಸಾಮಾನ್ಯ ವಿಜ್ಞಾನ-ಜೀವ ಶಾಸ್ತ್ರ)

Advertisements

ಸಾಮಾನ್ಯ ಜ್ಞಾನ ಎನ್ನುವುದು, ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ . ಆದ್ದರಿಂದ ಪರೀಕ್ಷಾಭ್ಯರ್ಥಿಗಳಿಗೆ ಸಹಾಯವಾಗಲೆಂದು ಕೆಲ ಪ್ರಶ್ನೆಗಳನ್ನು ಉತ್ತರದ ಜೊತೆಗೆ ನೀಡಿದ್ದೇವೆ. Image result for ಸಾಮಾನ್ಯ ಜ್ಞಾನ

ಸಂಚಿಕೆ 8:- ಸಾಮಾನ್ಯ ವಿಜ್ಞಾನ(ಜೀವ ಶಾಸ್ತ್ರ)

G.K. ಭಾಗ-7ಕ್ಕಾಗಿ :- ಇಲ್ಲಿ ಕ್ಲಿಕ್ಕಿಸಿ.
G.K. ಭಾಗ-9ಕ್ಕಾಗಿ :- ಇಲ್ಲಿ ಕ್ಲಿಕ್ಕಿಸಿ.
G.K ಎಲ್ಲಾ Pdf ಗಾಗಿ : ಇಲ್ಲಿ ಕ್ಲಿಕ್ಕಿಸಿ
1.)ಸ್ರವಿಕೆಯ ಕಾರ್ಯವನ್ನು ಮಾಡುವ ಜೀವಕೋಶ ಸಮೂಹವನ್ನು ಏನೆಂದು ಕರೆಯುತ್ತಾರೆ?
A). ಗ್ರಂಥಿ 
B). ವೈರಸ್ 
C). ತುಕ್ಕುಜೀವಿ 
D). ಚಯಾಪಚಯ
Correct Ans: (A)
Description: ಗ್ರಂಥಿ ಸ್ರವಿಕೆಯ ಕಾರ್ಯವನ್ನು ಮಾಡುವ ಜೀವಕೋಶ ಸಮೂಹವನ್ನು ಗ್ರಂಥಿ ಎನ್ನುವರು. ಅಥವಾ ಯಾವ ಅಮಗದ ಜೀವಕೋಶಗಳು ಸ್ರವಿಕೆಯ ಕಾರ್ಯಕ್ಕಾಗಿ ವೈಶಿಷ್ಟತ್ಯೆಯನ್ನು ಪಡೆದಿದೆಯೋ ಆ ಅಂಗವನ್ನು ಗ್ರಂಥಿ ಎಂದು ಕರೆಯುತ್ತಾರೆ. ಗ್ರಂಥಿಗಳಲ್ಲಿ ಮೂರು ವಿಧಗಳಿವೆ. 1.ನಳಿಕಾ ಗ್ರಂಥಿ 2.ನಿರ್ನಾಳ ಗ್ರಂಥಿ 3.ಮಿಶ್ರ ಗ್ರಂಥಿ
2.) ನಳಿಕಾ ಗ್ರಂಥಿಗಳಲ್ಲಿ ಅತ್ಯಂತ ದೊಡ್ಡದಾದ ಗ್ರಂಥಿ ಯಾವುದು?
A). ಕರುಳಿನ ಗ್ರಂಥಿ 
B). ಲಾಲಾರಸ ಗ್ರಂಥಿ 
C). ಪಿತ್ತಜನಕಾಂಗ 
D). ಅಶ್ರು ಗ್ರಂಥಿ
Correct Ans: (C) 
Description:  ಪಿತ್ತಜನಕಾಂಗ
ಪಿತ್ತಜನಕಾಂಗ ಅತ್ಯಂತ ದೊಡ್ಡ ಗ್ರಂಥಿಯಾಗಿದೆ. ಇದರಿಂದ ಸ್ರವಿಕೆಯಾಗುವ ವಸ್ತುವನ್ನು ಪಿತ್ತರಸ ಅಥವಾ ಬೈಲೆ ಎಂದು ಕರೆಯುತ್ತಾರೆ. ಪಿತ್ತರಸದಲ್ಲಿ ಯಾವುದೇ ಕಿಣ್ವ ಇರುವುದಿಲ್ಲ.
3.) ಜೀರ್ಣಕ್ರಿಯೆಗೆ ಸಹಾಯವಾಗುವ ‘ಅಮೈಲೇಸ್ ಕಿಣ್ವ’ ಯಾವ ಗ್ರಂಥಿಯಲ್ಲಿ ಕಂಡು ಬರುತ್ತದೆ?
A). ಅಶ್ರು ಗ್ರಂಥಿ 
B). ಲಾಲಾರಸ ಗ್ರಂಥಿ 
C). ಕರುಳಿನ ಗ್ರಂಥಿ 
D). ಪಿತ್ತಜನಕಾಂಗ
Correct Ans: (B) 
Description: ಲಾಲಾರಸ ಗ್ರಂಥಿ
ಲಾಲಾರಸ ಗ್ರಂಥಿ ಬಾಯಿಯ ಅಂಗಳದಲ್ಲಿ ಕಂಡುಬರುತ್ತದೆ. ಇವುಗಳ ಸಂಖ್ಯೆ 3 ಜೊತೆ. ಈ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತು ಲಾಲಾರಸ ಅಥವಾ ಸರೈವಾ. ಈ ಲಾಲಾರಸದಲ್ಲಿ ಅಮೈಲೇಸ್ ಕಿಣ್ವ ಇದ್ದು ಇದು ಜೀರ್ಣ ಕ್ರಿಯೆಗೆ ಸಹಾಯಕವಾಗಿದೆ.
4.) ಕೆಳಗಿನ ಯಾವ ಗ್ರಂಥಿಗಳಲ್ಲಿ ‘ಹೈಡ್ರೊಕ್ಲೋರಿಕ್ ಆಮ್ಲ’ ಕಂಡು ಬರುತ್ತದೆ?
A). ಅಶ್ರು ಗ್ರಂಥಿ 
B). ಲಾಲಾರಸ ಗ್ರಂಥಿ 
C). ಪಿತ್ತಜನಕಾಂಗ 
D). ಜಠರ ರಸ ಗ್ರಂಥಿ
Correct Ans: (D) 
Description: ಜಠರ ರಸ ಗ್ರಂಥಿ
ಜಠರ ರಸ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತು ಜಠರ ರಸ. ಈ ಜಠರ ರಸದಲ್ಲಿ ಪೆಪ್ಸಿನ್ ಮತ್ತು ರೆನಿನ್ ಕಿಣ್ವಗಳು ಕಂಡು ಬರುತ್ತವೆ. ಜೊತೆಗೆ ‘ಹೈಡ್ರೊಕ್ಲೋರಿಕ್’ ಆಮ್ಲ ಕೂಡ ಕಂಡುಬರುತ್ತದೆ.
5.) ಕಣ್ಣು ಗುಡ್ಡೆಯನ್ನು ತೇವದಿಂದ ಕೂಡಿರುವಂತೆ ಮಾಡುವ ಗ್ರಂಥಿ ಯಾವುದು?
A). ಕರುಳಿನ ಗ್ರಂಥಿ 
B). ಅಶ್ರು ಗ್ರಂಥಿ 
C). ಲಾಲಾರಸ ಗ್ರಂಥಿ 
D). ಜಠರ ರಸ ಗ್ರಂಥಿ
Correct Ans: (B) 
Description:
ಅಶ್ರು ಗ್ರಂಥಿ
ಅಶ್ರು ಗ್ರಂಥಿ ಕಣ್ಣಿರನ್ನು ಸ್ರವಿಕೆ ಮಾಡುತ್ತದೆ. ಕಣ್ನೀರು ಕಣ್ಣು ಗುಡೆಯನ್ನು ತೇವದಿಂದ ಇರುವಂತೆ ನೋಡಿಕೊಳ್ಳುತ್ತದೆ. ಲಾಲಾರಸ ಮತ್ತು ಕಣ್ಣೀರಿನಲ್ಲಿ ಲೈಸೋಸೋಮ್‌ ಎಂಬ ಕಿಣ್ವಗಳಿವೆ, ಇದು ಬ್ಯಾಕ್ಟೀರಿಯಾಗಳನ್ನ ನಾಶ ಮಾಡುತ್ತದೆ.
6.) ಯಾವ ಗ್ರಂಥಿಗಳ ವಿಧವನ್ನು ‘ಅಂತಸ್ರಾವ ಗ್ರಂಥಿ’ ಎಂದು ಕರೆಯುತ್ತಾರೆ?
A). ನಳಿಕಾ ಗ್ರಂಥಿ 
B). ಮಿಶ್ರ ಗ್ರಂಥಿ 
C). ನಿರ್ನಾಳ ಗ್ರಂಥಿ 
D). ಮೇಲಿನ ಯಾವುದು ಅಲ್ಲ
Correct Ans: (C) 
Description: ನಿರ್ನಾಳ ಗ್ರಂಥಿ
ನಿರ್ನಾಳ ಗ್ರಂಥಿಗಳಿಂಧ ಸ್ರವಿಕೆಯಾಗುವ ಹಾರ್ಮೋನುಗಳು ನೇರವಾಗಿ ರಕ್ತದೊಳಗೆ ಸ್ರವಿಕೆಯಾಗುತ್ತದೆ, ಆದ್ದರಿಂದ ನಿರ್ನಾಳ ಗ್ರಂಥಿಗಳನ್ನು ‘ಅಂತಸ್ರಾವ ಗ್ರಂಥಿ’ ಎಂದು ಕರೆಯುತ್ತಾರೆ.
7.) ನಿರ್ನಾಳ ಗ್ರಂಥಿಗಳು ಸ್ರವಿಸುವ ರಾಸಾಯನಿಕ ವಸ್ತುಗಳಿಗೆ ಏನೆಂದು ಕರೆಯುತ್ತಾರೆ?
A). ಹಾರ್ಮೋನುಗಳು 
B). ಬೈಲೆ 
C). ಸಲೈವಾ 
D). ಮೇಲಿನ ಮೂರು ಸರಿ
Correct Ans: (A) 
Description:
ಹಾರ್ಮೋನುಗಳು
ನಿರ್ನಾಳ ಗ್ರಂಥಿಗಳಿ ನಳಿಕೆಗಳನ್ನು ಹೊಂದಿರುವುದಿಲ್ಲ. ನಿರ್ನಾಳ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತುಗಳಿಗೆ ‘ಹಾರ್ಮೋನುಗಳು’ (ಚೋದನ) ಎಂದು ಕರೆಯುತ್ತಾರೆ. ಈ ಹಾರ್ಮೋನುಗಳು ಅಮೈನೊ ಆಮ್ಲ, ಪ್ರೊಟೀನ್ ಅಥವಾ ಸ್ಟೀರಾಯಿಲ್ಡಗಳಿಂದ ಮಾಡಲ್ಪಟ್ಟಿರುತ್ತದೆ.
8.) ‘ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?
A). ಹೈಪೋಥಲಾಮಸ್ ಗ್ರಂಥಿ 
B). ಪೀನಿಯಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಪಿಟ್ಯುಟರಿ ಗ್ರಂಥಿ
Correct Ans: (A) 
Description:
ಹೈಪೋಥಲಾಮಸ್ ಗ್ರಂಥಿ
ಹೈಪೋಥಲಾಮಸ್ ಗ್ರಂಥಿಯು ಮೆದುಳಿನ ಭಾಗದಲ್ಲಿ ಕಂಡು ಬರುತ್ತದೆ. ಪಿಟ್ಯೂಟರಿ ಗ್ರಂಥಿಯ ಚಟುವಟಿಕೆಗಳನ್ನು ಮೆದುಳಿನ ಹೈಪೋಥಲಾಮಸ್ ಭಾಗವು ನಿಯಂತ್ರಿಸುತ್ತದೆ ಆದ್ದರಿಂದ ಇದನ್ನು ‘ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಕರೆಯುತ್ತಾರೆ. ಈ ಗ್ರಂಥಿಯಿಂದ ಆಕ್ಸಿಟೋಸಿನ್ ಮತ್ತು ವೆಸೋಪ್ರೆಸ್ಸಿನ್ ಹಾರ್ಮೋನ್‌ಗಳು ಸ್ರವಿಕೆಯಾಗುತ್ತದೆ.
9.) ಮಗುವಿನ ಜನನಕ್ಕೆ ಕಾರಣವಾಗುವ ಹಾರ್ಮೋನು ಯಾವುದು?
A). ಮೆಲಟೋನಿಕ್ 
B). ಆಕ್ಸಿಟೋಸಿನ್ 
C). ವೆಸೋಪ್ರೆಸ್ಸಿನ್ 
D). ಕಾರ್ಟಿಸೋಲ್
Correct Ans: (B) 
Description:
ಆಕ್ಸಿಟೋಸಿನ್
ಹೈಪೋಥಲಾಮಸ್ ಗ್ರಂಥಿಯಿಂದ ಸ್ರವಿಕೆಯಾಗಗುವ ಆಕ್ಸಿಟೋಸಿನ್ ಹಾರ್ಮೋನ್ ಮಗುವಿನ ಜನನಕ್ಕೆ ಕಾರಣವಾಗಿದೆ. ಮತ್ತು ವೆಸೋಪ್ರೆಸ್ಸಿನ್ ಹಾರ್ಮೋನ್ ದೇಹದ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ.
10.) ಮೆಲಟೋನಿನ್ ಹಾರ್ಮೋನ್‌ ಯಾವ ಗ್ರಂಥಿಯ ಸ್ರವಿಕೆಯಾಗಿದೆ?
A). ಹೈಪೋಥಲಾಮಸ್ ಗ್ರಂಥಿ 
B). ಪಿಟ್ಯುಟರಿ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಪೀನಿಯಲ್ ಗ್ರಂಥಿ
Correct Ans: (D) 
Description:
ಪೀನಿಯಲ್ ಗ್ರಂಥಿ
ಪೀನಿಯಲ್ ಗ್ರಂಥಿ ಎಫಿಥಲಾಮಸ್ ಭಾಗದಲ್ಲಿ ಕಂಢುಬರುತ್ತದೆ. ಪೀನಿಯಲ್ ಗ್ರಂಥಿಯಿಂದ ಸ್ರವಿಕೆಯಾಗುವ ಮೆಲಟೋನಿಕ್ ಹಾರ್ಮೋನ್ ನಿದ್ದೆ ಯನ್ನು ಉಂಟು ಮಾಡುತ್ತದೆ.
11.) ಅತ್ಯಂತ ಚಿಕ್ಕ ಗ್ರಂಥಿ ಯಾವುದು?
A). ಪಿಟ್ಯೂಟರಿ ಗ್ರಂಥಿ 
B). ಆ್ಯಡ್ರಿನಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಥೈಮಸ್ ಗ್ರಂಥಿ
Correct Ans: (A) 
Description:
ಪಿಟ್ಯೂಟರಿ ಗ್ರಂಥಿ
ಅತ್ಯಂತ ಚಿಕ್ಕ ಗ್ರಂಥಿ ಪಿಟ್ಯೂಟರಿ ಗ್ರಂಥಿ. ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ. ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.
12.) ಮೆದುಳಿನ ಕೆಳಗೆ ಮತ್ತು ತಲೆಯ ಮಧ್ಯದಲ್ಲಿರುವ ಗ್ರಂಥಿ ಯಾವುದು?
A). ಹೈಪೋಥಲಾಮಸ್ ಗ್ರಂಥಿ 
B). ಪ್ಯಾರಾ ಥೈರಾಯಿಡ್ 
C). ಪಿಟ್ಯೂಟರಿ ಗ್ರಂಥಿ 
D).
ಪೀನಿಯಲ್ ಗ್ರಂಥಿ
Correct Ans: (C) 
Description:
ಪಿಟ್ಯೂಟರಿ ಗ್ರಂಥಿ
ಮೆದುಳಿನ ಕೆಳಗೆ ಮತ್ತು ತಲೆಯ ಮಧ್ಯದಲ್ಲಿರುವ ಗ್ರಂಥಿ ಪಿಟ್ಯೂಟರಿ ಗ್ರಂಥಿ. ಪಿಟ್ಯೂಟರಿ ಗ್ರಂಥಿ ಸ್ಫುರಿಸುವ ಹಾರ್ಮೋನುಗಳನ್ನು ದೇಹದ ಬೆಳವಣಿಗೆ, ಮೂತ್ರಪಿಂಡಗಳ ಕಾರ್ಯನಿರ್ವಹಣೆ ಮತ್ತು ಲೈಂಗಿಕ ಅಂಗಗಳ ಮೇಲೆ ಪ್ರಭಾವ ಹೊಂದಿದೆ.
13.) ಯಾವ ಗ್ರಂಥಿಯನ್ನು ‘ಅಂತಃಸಾವ್ರಕ ವಾದ್ಯಮೇಳದ ನಿರ್ವಾಹಕ’ ಎಂದು ಕರೆಯುತ್ತಾರೆ?
A). ಪಿಟ್ಯೂಟರಿ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಆ್ಯಡ್ರಿನಲ್ ಗ್ರಂಥಿ 
D). ಥೈಮಸ್ ಗ್ರಂಥಿ
Correct Ans: (A) 
Description:
ಪಿಟ್ಯೂಟರಿ ಗ್ರಂಥಿ
ಪಿಟ್ಯೂಟರಿ ಗ್ರಂಥಿಯನ್ನು ‘ಅಂತಃಸಾವ್ರಕ ವಾದ್ಯಮೇಳದ ನಿರ್ವಾಹಕ’ ಎಂದು ಕರೆಯುತ್ತಾರೆ. ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈಯುರೆಟಿಕ್ ಹಾರ್ಮೋನನ್ನು (ADH) ಉತ್ಪತ್ತಿ ಮಾಡಿದರೆ “ಡಯಾಬಿಟಿಸ್ ಇನ್ ಸಿಪಿಡಿಸ್”ಎಂಬ ರೋಗ ಉಂಟಾಗುತ್ತದೆ.
14.) ‘ಗ್ರಂಥಿಗಳ ರಾಜ’ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?
A). ಹೈಪೋಥಲಾಮಸ್ ಗ್ರಂಥಿ 
B). ಪೀನಿಯಲ್ ಗ್ರಂಥಿ 
C). ಪ್ಯಾರಾ ಥೈರಾಯಿಡ್ 
D). ಪಿಟ್ಯೂಟರಿ ಗ್ರಂಥಿ
Correct Ans: (D) 
Description:
ಪಿಟ್ಯೂಟರಿ ಗ್ರಂಥಿ
ಪಿಟ್ಯೂಟರಿ ಗ್ರಂಥಿಯಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳು ಇತರ ಗ್ರಂಥಿಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಈ ಗ್ರಂಥಿಯನ್ನು ‘ಗ್ರಂಥಿಗಳ ರಾಜ’ ಎಂದು ಕರೆಯುತ್ತಾರೆ.
15.) ನಿರ್ನಾಳ ಗ್ರಂಥಿಗಳಲ್ಲಿ ದೊಡ್ಡದಾದ ಗ್ರಂಥಿ ಯಾವುದು?
A). ಥೈಮಸ್ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಹೈಪೋಥಲಾಮಸ್ ಗ್ರಂಥಿ 
D). ಪೀನಿಯಲ್ ಗ್ರಂಥಿ
Correct Ans: (B) 
Description:
ಥೈರಾಯಿಡ್ ಗ್ರಂಥಿ
ನಿರ್ನಾಳ ಗ್ರಂಥಿಗಳಲ್ಲಿ ದೊಡ್ಡದಾದ ಗ್ರಂಥಿ ಥೈರಾಯಿಡ್ ಗ್ರಂಥಿ. ಈ ಗ್ರಂಥಿಯಿಂದ ಥೈರಾಕ್ಸಿನ್ (T4) ಮತ್ತು ಟ್ರೈಐಡೋ ಥೈರೋನಿಸ್ (T3) ಹಾರ್ಮೋನ್‌ಗಳ ಸ್ರವಿಕೆಯಾಗುತ್ತದೆ.
16.) ಕುತ್ತಿಗೆಯ ಉಸಿರು ನಾಳದ ಮುಂದೆ ಇರುವ ಗ್ರಂಥಿ ಯಾವುದು?
A). ಪಿಟ್ಯೂಟರಿ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಆ್ಯಡ್ರಿನಲ್ ಗ್ರಂಥಿ 
D). ಥೈಮಸ್ ಗ್ರಂಥಿ
Correct Ans: (B) 
Description:
ಥೈರಾಯಿಡ್ ಗ್ರಂಥಿ
ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ. ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.
17.) ಥೈರಾಯಿಡ್ ಕೊರತೆಯಿಂದ ಬರುವ ರೋಗ ಯಾವುದು?
A). ಗಳಗಂಡ 
B). ಕಾಲಾರ 
C). ಕ್ಯಾನ್ಸರ್ 
D). ಕಾಮಾಲೆ
Correct Ans: (A) 
Description:
ಗಳಗಂಡ
ಥೈರಾಯಿಡ್ ಕೊರತೆಯಿಂದ ಬರುವ ರೋಗ ಗಳಗಂಡ (ಗಾಯಿಟರ್). ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ.
18.) ಥೈರಾಕ್ಸಿನ್ ಉತ್ಪತ್ತಿ ಕಡಿಮೆಯಾಗುವ ಸ್ಥಿತಿಯನ್ನು ಏನೆಂದು ಕರೆಯುತ್ತಾರೆ?
A). ಹೈಪರ್ ಥೈರಾಡಿಸಮ್ 
B). ನಾನ್‌ಎಪಿನೆಫ್ರಿನ್ 
C). ಹೈಪೊಥೈರಾಡಿಸಮ್ 
D). ಮೇಲಿನ ಯಾವುದು ಅಲ್ಲ
Correct Ans: (C) 
Description:
ಹೈಪೊಥೈರಾಡಿಸಮ್
ಥೈರಾಕ್ಸಿನ್ ಉತ್ಪತ್ತಿ ಕಡಿಮೆಯಾಗುವ ಸ್ಥಿತಿಯನ್ನು ಹೈಪೊಥೈರಾಡಿಸಮ್ ಎಂದು ಕರೆಯುತ್ತಾರೆ. ಇದರಿಂದ ಗಳಗಂಡ ರೋಗ, ಮೀಕ್ಸೆಡಿಮಾ ಮತ್ತು ಕ್ರೆಟಿನಿಸಮ್ ಕಾಯಿಲೆಗಳು ಬರುತ್ತವೆ. ಥೈರಾಕ್ಸಿನ್ ಉತ್ಪತ್ತಿ ಹೆಚ್ಚಾಗುವ ಸ್ಥಿತಿಯನ್ನು ಹೈಪರ್ ಥೈರಾಡಿಸಮ್ ಎಂದು ಕರೆಯುತ್ತಾರೆ.
19.) ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಂಟಾಗುವ ಸ್ಥಿತಿ?
A). ಗಳಗಂಡ 
B). ಮೀಕ್ಸೆಡಿಮಾ 
C). ಕ್ರೆಟಿನಿಸಮ್ 
D). ಯಾವುದು ಅಲ್ಲ
Correct Ans: (B) 
Description:
ಮೀಕ್ಸೆಡಿಮಾ
ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು “ಮಿಕ್ಸೆಡಿಮಾ” ಎಂದು ಕರೆಯುತ್ತಾರೆ.
20.) ಮೇಧೋಜೀರಕ ಗ್ರಂಥಿಯ ಅಂತಃಸ್ರಾವಕ ಕೋಶಗಳನ್ನು ಹೀಗೆನ್ನುತ್ತಾರೆ?
A). ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು 
B). ಆ್ಯಡ್ರಿನಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಥೈಮಸ್ ಗ್ರಂಥಿ
Correct Ans: (A) 
Description:
ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು
ಮೇಧೋಜೀರಕ ಗ್ರಂಥಿಯ ಅಂತಃಸ್ರಾವಕ ಕೋಶಗಳನ್ನು ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಎನ್ನುವರು. · ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.
21.) ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು?
A). ಡಯಾಬಿಟಿಸ್ 
B). ಮೀಕ್ಸೆಡಿಮಾ 
C). ಕ್ರೆಟಿನಿಸಮ್ 
D). ಮಲೇರಿಯಾ
Correct Ans: (A) 
Description:
ಡಯಾಬಿಟಿಸ್
ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗುವ ಕಾಯಿಲೆ ಡಯಾಬಿಟಿಸ್. ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.
22.) ಸುಪ್ರಾರೀನಲ್ ಗ್ರಂಥಿ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?
A). ಥೈಮಸ್ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಹೈಪೋಥಲಾಮಸ್ ಗ್ರಂಥಿ 
D). ಅಡ್ರಿನಲ್ ಗ್ರಂಥಿ
Correct Ans: (D) 
Description:
ಅಡ್ರಿನಲ್ ಗ್ರಂಥಿ
ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ. ಈ ರೀತಿ ಕಂಡು ಬರುವುದಕ್ಕೆ ಸುಪ್ರಾರೀನಲ್ ಗ್ರಂಥಿ ಎಂದು ಕರೆಯುವರು.
23.) ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಹೆಸರು ಪಡೆದಿರುವ ಹಾರ್ಮೋನ್ ಯಾವುದು?
A). ಥೈರಾಕ್ಸಿನ್ ಹಾರ್ಮೋನ್ 
B). ಎಪಿನೆಫ್ರಿನ್ ಹಾರ್ಮೋನ್ 
C). ಅಲ್ಡೋಸ್ಫಿರೋನ್
ಆರ್ಮೋನ್ 
D). ಕ್ಯಾಲ್ಸಿಟೋನಿನ್ ಹಾರ್ಮೋನ್
Correct Ans: (B) 
Description:
ಎಪಿನೆಫ್ರಿನ್ ಹಾರ್ಮೋನ್
ಎಪಿನೆಫ್ರಿನ್ ಹಾರ್ಮೋನ್ ತುರ್ತು ಪರಿಸ್ಥಿತಿಯಲ್ಲಿ ಉಸಿರಾಟ ಕ್ರಿಯೆ ಮತ್ತು ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದನ್ನು ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಕರೆಯುತ್ತಾರೆ.
24.) ಹೃದಯದ ಪಕ್ಕದಲ್ಲಿ ಕಂಡು ಬರುವ ಗ್ರಂಥಿ ಯಾವುದು?
A). ಥೈರಾಯಿಡ್ ಗ್ರಂಥಿ 
B). ಹೈಪೋಥಲಾಮಸ್ ಗ್ರಂಥಿ 
C). ಥೈಮಸ್ ಗ್ರಂಥಿ 
D). ಅಡ್ರಿನಲ್ ಗ್ರಂಥಿ
Correct Ans: (C) 
Description:
ಥೈಮಸ್ ಗ್ರಂಥಿ
ಹೃದಯದ ಪಕ್ಕದಲ್ಲಿ ಕಂಡು ಬರುವ ಗ್ರಂಥಿ ಥೈಮಸ್ ಗ್ರಂಥಿ. ಇದರಿಂದ ಥೈಮೋಸಿನ್ ಹಾರ್ಮೋನ್ ಮತ್ತು T-Lympocyte ಬಿಳಿ ರಕ್ತಕಣ ಉತ್ಪತ್ತಿಯಾಗುತ್ತದೆ. ಥೈಮೋಸಿನ್ ಹಾರ್ಮೋನ್ ದೇಹದ ಬೆಳವಣಿಗೆಗೆ ಕಾರಣವಾಗಿದೆ. ಮತ್ತು T-Lympocyte ಬಿಳಿ ರಕ್ತಕಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
25.) ವೃಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳಿಗೆ ಏನೆಂದು ಕರೆಯುವರು?
A). ಈಸ್ಟ್ರೋಜನ್ 
B). ಎಪಿನೆಫ್ರಿನ್ 
C). ಕ್ಯಾಲ್ಸಿಟೋನಿನ್ 
D). ಆ್ಯಂಡ್ರೋಜನ್
Correct Ans: (D) 
Description:
ಆ್ಯಂಡ್ರೋಜನ್
ವೃಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳಿಗೆ ಆ್ಯಂಡ್ರೋಜನ್ ಎಂದು ಕರೆಯುವರು. ಪ್ರಮುಖವಾದ ಆ್ಯಂಡ್ರೋಜನ್ ಹಾರ್ಮೋನ್ ‘ಟೆಸ್ಟೊಸ್ಮಿರಾನ್’. ಇದು ಗಂಡಿನ ಪ್ರಾಥಾಮಿಕ ಮತ್ತು ದ್ವಿತೀಯ ಲೈಂಗಿಕ ಲಕ್ಷಣಗಳಿಗೆ ಕಾರಣವಾಗಿದೆ.
26.) ಅಂಡಾಶಯಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳಿಗೆ ಏನೆಂದು ಕರೆಯುತ್ತಾರೆ?
A). ಎಪಿನೆಫ್ರಿನ್ 
B). ಈಸ್ಟ್ರೋಜನ್ 
C). ಆ್ಯಂಡ್ರೋಜನ್ 
D). ಮೇಲಿನ ಯಾವುದು ಸರಿ ಅಲ್ಲ
Correct Ans: (B) 
Description:
ಈಸ್ಟ್ರೋಜನ್
ಅಂಡಾಶಯಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳಿಗೆ ಈಸ್ಟ್ರೋಜನ್ ಕರೆಯುತ್ತಾರೆ. ಪ್ರಮುಖವಾದ ಈಸ್ಟ್ರೋಜನ್ ಹಾರ್ಮೋನ್ – ‘ಈಸ್ಟ್ರಾಡಯಾಲ್’ ಇದು ಹೆಣ್ಣಿನ ಪ್ರಾಥಾಮಿಕ ಮತ್ತು ದ್ವಿತೀಯ ಲೈಂಗಿಕ ಲಕ್ಷಣಗಳಿಗೆ ಕಾರಣವಾಗಿದೆ.
27.) ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ರಚನೆಗೆ ___ ಎನ್ನುವರು.
A). ಕಾರ್ಪಸ್ ಲೂಟಿಯಮ್ 
B). ಈಸ್ಟ್ರೋಜನ್ 
C). ಆ್ಯಂಡ್ರೋಜನ್ 
D). ಮೇಲಿನ ಎಲ್ಲವೂ ತಪ್ಪು
Correct Ans: (A) 
Description:
ಕಾರ್ಪಸ್ ಲೂಟಿಯಮ್
ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ರಚನೆಗೆ ಕಾರ್ಪಸ್ ಲೂಟಿಯಮ್ ಎನ್ನುವರು. ಇದು ಪ್ರೋಜೆಸ್ಟಿ ರಾನ್ ಹಾರ್ಮೊನ್‌ನ್ನು ಸ್ರವಿಕೆ ಮಾಡುತ್ತದೆ. ಇದು ಗರ್ಭಕೋಶದಲ್ಲಿ ಗರ್ಭಧಾರಣೆಗೆ ಬೇಕಾದ ಎಲ್ಲಾ ಬದಲಾವಣೆಯನ್ನು ಉಂಟು ಮಾಡುತ್ತದೆ.
ನೈಸಗರ್ಿಕ ಸಂಪನ್ಮೂಲಗಳು
1 ಪ್ರಕೃತಿಯಲ್ಲಿ ದೊರಕುವ ನಮಗೆ ಉಪಯುಕ್ತವಾಗುವ ವಸ್ತುಗಳನ್ನು ‘ನೈಸಗರ್ಿಕ ಸಂಪನ್ಮೂಲಗಳು’ ಎನ್ನುವರು.
2 ಬಹುತೇಕ ನೈಸಗರ್ಿಕ ಸಂಪನ್ಮೂಲಗಳು ಜೀವಿಗಳು ಇಲ್ಲವೇ ಜೈವಿಕ ಉತ್ಪನ್ನಗಳಾಗಿವೆ.
3 ಅರಣ್ಯ ಹಾಗೂ ಜೀವಿಗಳು ಜೀವಂತ ನೈಸಗರ್ಿಕ ಸಂಪನ್ಮೂಲಗಳಿಗೆ ಉದಾಹಣೆ.
4 ನೆಲ, ನೀರು, ಗಾಳಿ ಮತ್ತು ಖನಿಜಗಳು, ಅಧಿರುಗಳು ನಿಜರ್ಿವ ಸಂಪನ್ಮೂಲಗಳಿಗೆ ಉದಾಹರಣೆ.
5 ಸೌರಶಕ್ತಿ, ಗಾಳಿ, ನೀರು, ವನ್ಯಜೀವಿಗಳು, ಅರಣ್ಯಗಳು ಹಾಗೂ ಕೃಷಿ ಬೆಳೆಗಳು ನವೀಕರಣಗೊಳ್ಳುವ ನೈಸಗರ್ಿಕ
ಸಂಪನ್ಮೂಲಗಳು.
6 ಸೌರಶಕ್ತಿ ಹಾಗೂ ಗಾಳಿ ಬರಿದಾಗದ ಸಂಪನ್ಮೂಲಗಳು. 7 ಅರಣ್ಯಗಳು ಮತ್ತು ವನ್ಯಜೀವಿಗಳಂತಹ
ಸಂಪನ್ಮೂಲಗಳು ನಿರಂತರ ಬಳಕೆಯಿಂದಾಗಿ ಅಥವಾ ಮಾನವನ ಹಸ್ತಕ್ಷೇಪದಿಂದಾಗಿ ಕ್ಷೀಣಿಸಬಹುದು, ಆದರೆ ಇವುಗಳನ್ನು
ಪುನರುತ್ಪತ್ತಿ ಮಾಡಬಹುದು. (ಇವುಗಳನ್ನು ಬರಿದಾಗುವ ಸಂಪನ್ಮೂಲಗಳು ಎನ್ನುವರು.)
8 ಒಮ್ಮೇ ಕ್ಷೀಣಿಸಿ ಪುನಃಭತರ್ಿ ಮಾಡಲಾಗದ ಸಂಪನ್ಮೂಲಗಳನ್ನು ನವೀಕರಣಗೊಳ್ಳದ ಸಂಪನ್ಮೂಲಗಳು
ಎನ್ನುವರು.
9 ನೀರು ಜೀವಿಗಳ ಉಳುವಿಗೆ ಅಗತ್ಯವಾದ ಒಂದು ಅನನ್ಯ ಹಾಗೂ ಅಪೂರ್ವ ನೈಸಗರ್ಿಕ ಸಂಪನ್ಮೂಲವಾಗಿದೆ.
10 ಭೂಮಿಯ ಮೇಲಿರುವ ನೀರಿನ ಒಟ್ಟು ಪ್ರಮಾಣದ ಶೇ 97 ರಷ್ಟು ಸಾಗರ ಸಮುದ್ರ ಹಾಗೂ ಇತರ ಬೃಹತ ನೀರಿನ
ಸಂಗ್ರಹಗಳಲ್ಲಿ ಹಂಚಿ ಹೋಗಿದೆ.
11 ವಾತಾವರಣದಲ್ಲಿ ನೀರಾವಿಯ ರೂಪದಲ್ಲಿ ಶೇ 0.001 ರಷ್ಟು ನೀರಿದೆ.
12 ಶೇ 2.4 ರಷ್ಟು ನೀರು ಹಿಮಾವೃತ ಹಾಗೂ ದೃವ ಪ್ರದೇಶದ ಮಂಜುಗಡ್ಡೆಗಳಲ್ಲಿ ಸೇರಿದೆ.
13 ಉಳಿದ ನೀರಿನ ಪ್ರಮಾಣ ನದಿಗಳು ಸರೋವರಗಳು ಕೊಳಗಳು ಮುಂತಾದ ಜಲ ಸಂಗ್ರಹಗಳಲ್ಲಿದೆ.
14 ಅತ್ಯಂತ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುವುದು, ಕೃಷಿ ರಂಗದಲ್ಲಿ.
15 ನಮ್ಮ ದೇಶದ ವಾಷರ್ಿಕ ಮಳೆಯ ಪ್ರಮಾಣ ಸುಮಾರು 400 ಮಿಲಿಯನ್ ಹೆಕ್ಟರ್ ಮೀಟರಗಳು. ಸುಮಾರು 20 ಮಿಲಿಯನ್ ಹೆಕ್ಟೆರ್ ಮೀಟರಗಳಷ್ಟು ನೀರು ಭೂಮಿಯ ಮೈಲ್ಮೈಲ್ಲಿ ಹರಿಯುತ್ತದೆ.
16 ಪ್ರತಿ ವರ್ಷ ಮಾರ್ಚ 22 ರಂದು ವಿಶ್ವದಾದ್ಯಂತ ವಿಶ್ವ ಜಲ ದಿನ ಎಂದು ಆಚರಿಸಲಾಗುತ್ತಿದೆ.
17 ಮಣ್ಣು ಎಲ್ಲಾ ನೆಲ ಸಸ್ಯಗಳಿಗೆ ನೀರು ಮತ್ತು ಖನಿಜಾಂಶಗಳನ್ನು ಒದಗಿಸುವ ನೈಸಗರ್ಿಕ ಸಂಪನ್ಮೂಲ. ನೀರು
ಮಣ್ಣಿನಲ್ಲಿ ಜಿನುಗುತ್ತಿದ್ದಂತೆ ಶುದ್ದವಾಗುತ್ತದೆ.
18 ಮಣ್ಣಿನಲ್ಲಿರುವ ನೀರಿನ ಬಳಕೆಯ ಪ್ರಮಾಣಕ್ಕಿಂತ ಅಧಿಕ ನೀರನ್ನು ಸೇರಿಸಿದರೆ ನೀರಿನ ಮಟ್ಟ ಮೇಲೆರುವುದರಿ
ಲವಣಿಕರಣವಾಗಿ ಮಣ್ಣು ಹಾಳಾಗುವುದನ್ನು ಜೌಗುವಿಕೆ ಎನ್ನುವರು.
19 ಜೌಗುವಿಕೆ ಮತ್ತು ಲವಣಿಕರಗಳು ಒಮ್ಮೆ ಫಲವಾತ್ತಾಗಿದ್ದ ಭೂಮಿಯನ್ನು ಬರಡಾಗಿ ನಿಷ್ಪ್ರಯೋಜಕವಾಗುವಂತೆ
ಮಾಡುವುದನ್ನು ಮರೂಭೂಮೀಕರಣ ಎನ್ನುವರು. 
20 ಅರಣ್ಯನಾಶ ಹಾಗೂ ಮಿತಿಮೀರಿದ ಮೆಯುವಿಕೆಯಿಂದ ಮಣ್ಣಿನ ಸವಕಳಿಯಾಗುತ್ತದೆ.
21 ನೈಸಗರ್ಿಕ ಕ್ರಿಯೆಯಾದ ಬಂಡೆಗಳ ಶಿಥಿಲೀಕರಣವೆಂಬ ಪ್ರಕ್ರಿಯೆಯಿಂದ ಮಣ್ಣು ರೂಪಗೊಳ್ಳುತ್ತದೆ.
22 ಅರಣ್ಯಗಳು ನವೀಕರಿಸಬಹುದಾದ ಸಂಪನ್ಮೂಲಗಳಾಗಿದ್ದು ಚಲಚಕ್ರವನ್ನು ಉಳಿಸುತ್ತವೆ. ಇವುಗಳು ದೇಶದ ನೈಸಗರ್ಿಕ ಶ್ರೀಮಂತಿಕೆಯ ಸೂಚಕಗಳಾಗಿವೆ
23 ಪ್ರತಿ ವರ್ಷ ಮಾರ್ಚ 21 ರಂದು ವಿಶ್ವದಾದ್ಯಂತ ವಿಶ್ವ ಅರಣ್ಯದಿನ ಆಚರಿಸಲಾಗುತ್ತದೆ.
24 ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು ನೈಸಗರ್ಿಕ ಅನಿಲಗಳನ್ನು ಪಳೆಯುಳಿಕೆ ಇಂಧನಗಳು ಎನ್ನುವರು. ಮಿಲಿಯನ್
ವರ್ಷಗಳ ಹಿಂದೆ ಜೀವಿಸಿದ್ದ ಹಸಿರು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯ ಪಲವೇ ಈ ಇಂಧನಗಳು.
25 ಕಲ್ಲಿದ್ದಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ ಇರುವ ನೈಸಗರ್ಿಕ ಸಂಪನ್ಮೂಲ.
26 ಕಲ್ಲಿದ್ದಲಿನಲ್ಲಿ 3 ಪ್ರಕಾರಗಳು 1] ಅಂಥ್ರಸೈಟ ಸುಮಾರು 80% ಕಾರ್ಬನ್ 2] ಲಿಗ್ನೈಟ 50 ರಿಂದ 60% ಕಾರ್ಬನ್ 3] ಬಿಟುಮಿನಸ್ 40% ಗಿಂತ ಕಡಿಮೆ ಕಾರ್ಬನ ಹೊಂದಿದೆ.
27 ಪ್ರೆಟ್ರೋಲ್,ಡಿಸೇಲ್, ಸೀಮೆಎಣ್ಣೆ, ಕೀಲೆಣ್ಣೆ, ನಾಪ್ತಾ ಇವು ಪೆಟ್ರೋಲಿಯಂ ಉತ್ಪನ್ನಗಳು. ಇವು ಇಂದನದ ಶೇ 40
ರಷ್ಟನ್ನು ಪ್ರತಿನಿಧಿಸುತ್ತವೆ.
28 ಭೂಮಿಯ ಹೊರಪದರದಲ್ಲಿ ಸ್ವಾಭಾವಿಕವಾಗಿ ದೊರಕುವ, ಜೀವರಾಶಿಯಿಂದ ಉತ್ಪತ್ತಿ ಆಗದ ಅಜೈವಿಕ ಮೂಲದ
ವಸ್ತುವನ್ನು ಖನಿಜ ಎನ್ನುತ್ತೇವೆ.
29 ಖಜಿಗಳನ್ನು ಹೊರತೆಗೆದು ಸಂಸ್ಕರಿಸುವ ಕ್ರಿಯೆಗೆ ಗಣಿಗಾರಿಕೆ ಎನ್ನುವರು.
30 ಪ್ರಪಂಚದಲ್ಲಿರುವ ಅರಣ್ಯದ ಪ್ರಮಾಣ ಶೇ 20 ರಷ್ಟು ಮಾತ್ರ ಇದೆ.
ಸಾಮಾನ್ಯ ವಿಜ್ಞಾನ (ಜೀವಶಾಸ್ತ್ರ):
★ ವಿಟಾಮಿನ್ (ಜೀವಸತ್ವಗಳು) (Vitamins):
ಇವುಗಳು ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿವೆ.
.ವಿಟಾಮಿನ್ ಪದವನ್ನು ಮೊದಲು ಬಳಸಿದ ವಿಜ್ಞಾನಿ: ಫಂಕ್.
★ ಇದರಲ್ಲಿ ಎರಡು ವಿಧ
ನೀರಿನಲ್ಲಿ ಕರಗುವ ವಿಟಮಿನಗಳು ಬಿ ಮತ್ತು ಸಿ.
ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು ಎ.ಡಿ.ಇ.ಕೆ
★ ವಿಟಾಮಿನ್ ಎ….
ಇದರ ವೈಙ್ಙಾನಿಕ ಹೆಸರು ರೆಟಿನಾಲ್.
ಇದರ ಕೊರತೆಯಿಂದ ‘ಇರುಳು ಗುರುಡು ‘(ಕ್ಷೀರಾಪ್ಥಾಲ್ಮಿಯಾ)(ನಿಶಾಂಧತೆ) ರೋಗ ಬರುತ್ತದೆ.
ವಿಟಾಮಿನ್ ಎ ಹೊಂದಿರುವ ಭತ್ತದ ಬೆಳೆ ಗೋಲ್ಡನ್ ರೈಸ್.
ವರ್ಣಾಂಧತೆ ರೋಗವು ಸ್ತ್ರೀ ಯರಲ್ಲಿ ಕಂಡು ಬರುವ ಪ್ರಮಾಣ 0%
ಇರುಳುಗುರುಡುತನ ಅನುವಂಶೀಯ ರೋಗವಾಗಿದೆ.
ವಿಟಾಮಿನ ಎ ಹೆಚ್ಚು ಕಂಡು ಬರುವ ಆಹಾರ ಗಳು ಹಾಲು.ಗಜ್ಜರಿ.ಮೊಟ್ಟೆ.ಬಾಳೆಹಣ್ಣು.
ವಿಟಾಮಿನ್ ಎ ಯಿಂದ ಬರುವ ಮತ್ತೊಂದು ರೋಗ ಡರ್ಮಾಸೊಸಿಸ್.
★ ವಿಟಾಮಿನ್ ಸಿ..
ಇದರ ವೈಙ್ಙಾನಿಕ ಹೆಸರು ಅಸ್ಕ್ಯಾರ್ಬಿಕ್ ಆಯ್ಸಿಡ್.
ಇದರ ಕೊರತೆಯಿಂದ ಬರುವ ರೋಗ ಸ್ಕರ್ವಿ. ರಕ್ತಹೀನತೆ. ದಂತ, ಮೂಳೆ ಮತ್ತು ಪಸಡುಗಳ ನ್ಯೂನ ರಚನೆ. ಊದಿದ ಕಾಲುಗಳು.
ಈ ರೋಗದಲ್ಲಿ ನಾಲಿಗೆ ಮತ್ತು ತುಟಿ ಭಾಗದಲ್ಲಿ ಗಾಯಗಳಾಗುತ್ತವೆ.
ಇದು ಹೆಚ್ಚಾಗಿ ಸಿಟ್ರಸ್ ಹಣ್ಣುಗಳಲ್ಲಿ ಕಂಡು ಬರುತ್ತೆ
★ ವಿಟಾಮಿನ್ ಡಿ.
ವೈಙ್ಙಾನಿಕ ಹೆಸರು ಕ್ಯಾಲ್ಸಿಫೆರಾಲ್.
ಕೊರತೆಯಿಂದ ಬರುವ ರೋಗ
~ಚಿಕ್ಕಮಕ್ಕಳಲ್ಲಿ ರಿಕೆಟ್ಸ
~ವಯಸ್ಕರಲ್ಲಿ ಆಸ್ಟ್ಯಿಯೋ ಮಲೇಶಿಯಾಅ
ಇದು ಸೂರ್ಯನ ಬೆಳಕಿನ ಕಿರಣ ದಲ್ಲಿ ದೊರೆಯುತ್ತೆ.
ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣ ಗಳಿಂದ ತಯಾರಿಸುತ್ತಾರೆ.
★ ವಿಟಾಮಿನ್ ಇ.
ವೈಙ್ಙಾನಿಕ ಹೆಸರು ಟೋಕೊ ಫೆರಾಲ್.
ಕೊರತೆಯಿಂದ ಬರುವ ರೋಗ ಇನ್ ಪಟರ್ ಟೀಟಿ ಅರ್ ಬಂಜೆತನ. ಸ್ನಾಯು ಕ್ಷೀಣಿಕೆ.
ಉತ್ಕರ್ಷಣ ನಿರೋಧಿ, A,C,D & K ಜೀವಸತ್ವಗಳನ್ನು
ರಕ್ಷಿಸುತ್ತದೆ.
ಇದು ಹೆಚ್ಚಾಗಿ ಎಣ್ಣೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ. 
★ ವಿಟಾಮಿನ್ ಎಚ್.
ವೈಙ್ಙಾನಿಕ ಹೆಸರು ಬಯೋಟಿನ್
ಕೊರತೆಯಿಂದ ಬರುವ ರೋಗ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ..
★ ವಿಟಾಮಿನ್ ಕೆ.
ವೈಙ್ಙಾನಿಕ ಹೆಸರು ಪಿಲ್ಲೊ ಕಿನ್ವನ್, ಆಂಟಿಡಿಮೋ ರೇಜಿಕ್.
ಕೊರತೆಯಿಂದ ಬರುವ ರೋಗ ಕುಸುಮ ರೋಗ ಅರ್ ಹಿಮೋಪಿಲಿಯಾ
ಇದು ಹೆಚ್ಚಾಗಿ ಬೆಳೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.
★ ವಿಟಾಮಿನ್ ಬಿ1:
ವೈಙ್ಙಾನಿಕ ಹೆಸರು ಥೈಮಿನ್
ಕೊರತೆಯಿಂದ ಬರುವ ರೋಗ ಬೆರಿ ಬೆರಿ
ಈ ರೋಗದಲ್ಲಿ ಚರ್ಮರೋಗ ಬರುತ್ತವೆ ಮತ್ತು ನರದೌರ್ಬಲ್ಯ ಕಂಡು ಬರುತ್ತೆ.
ಹೆಚ್ಚಾಗಿ ಹಸಿರು ತರಕಾರಿ ,ಹಾಲು,ಬಾಳೆಹಣ್ಣು ,ಮೊಟ್ಟೆ ಯಲ್ಲಿ ಇದು ಸಿಗುತ್ತದೆ.
★ ವಿಟಾಮಿನ್ ಬಿ2:
ವೈಙ್ಙಾನಿಕ ಹೆಸರು ರೈಬೋಪ್ಲೆವಿನ್
ಕೊರತೆಯಿಂದ ಬರುವ ರೋಗ ಪೊಟೊಪೊಬಿಯ ಅರ್ ಬಿಳುಪು ರೋಗ.
ಹಸುವಿನ ಹಾಲು ಕಾಯಿಸಿದಾಗ ಹಲದಿ ಬಣ್ಣಕ್ಕೆ ಬರಲು ಕಾರಣ ಕ್ಯಾಂಥೋಪಿಲ್ ಅರ್ ರೈಬೋಪ್ಲೇವಿನ್
★ ವಿಟಾಮಿನ್ ಬಿ3:
ವೈಙ್ಙಾನಿಕ ಹೆಸರು ನಿಯಾಸಿನ್
ಕೊರತೆಯಿಂದ ಬರುವ ರೋಗ ಪೆಲ್ಲಾಗ್ರ
ಇದರ ಕೊರತೆಯಿಂದ ಸಣ್ಣ ಮಕ್ಕಳಲ್ಲಿ ಚರ್ಮ ರೋಗ ಕಂಡು ಬರುತ್ತವೆ.
★ ವಿಟಾಮಿನ್ ಬಿ6:
ವಙ್ಙಾನಿಕ ಹೆಸರು ಫೆರಿಡಾಕ್ಸಿನ್
ಕೊರತೆಯಿಂದ ಬರುವ ರೋಗ ಡಿ.ತ್ರಿ ಸಿಂಡ್ರೋಮ್ಸ್. ಮತ್ತು ಡಿ
ಒನ್ ಚರ್ಮರೋಗ.ಮತ್ತು ಡಿ ಟು ಮಾನಸಿಕ ರೊಗ ಮತ್ತು ಡಿ ಟು ಅತಿಸಾರಭೇದಿ.
★ ವಿಟಾಮಿನ್ ಬಿ 12..
ವೈಙ್ಙಾನಿಕ ಹೆಸರು ಸೈನೋಕೊಬಾಲ್ ಅಮೈನ್.
ಇದರಲ್ಲಿ ಇರುವ ಮೂಲ ವಸ್ತು ಕೋಬಾಲ್ಟ್
ಕೊರತೆಯಿಂದ ಬರುವ ರೋಗ ರಕ್ತಹೀನತೆ ಅರ್ ಅನಿಮಿಯ
ರಕ್ತ ಕೆಂಪಾಗಿರಲು ಕಾರಣ ಎಪ್ ಇ (ಕಬ್ಬಿಣ) ಹಿಮೋಗ್ಲೊಬಿನ್
ಎಲೆಗಳು ಹಸಿರಾಗಿರಲು ಕಾರಣ ಮೆಗ್ನೀಷಿಯಂ
ಇನ್ಸುಲಿನ್ ತಯ್ಯರಿಸಲು ಬಳಸುವ ಮತ್ತು ಕಬ್ಬಿಣ ತುಕ್ಕು ಹಿಡಿಯದಂತೆ ಬಳಸುವ ಮೂಲವಸ್ತು ಜಿಂಕ್.
ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು(ಉತ್ತರಗಳನ್ನು ಕೊನೆಯಲ್ಲಿ ನೀಡಲಾಗಿದೆ)
1. ಧೂಮಕೇತುವೊಂದನ್ನು ವ್ಯೋಮನೌಕೆಯೊಂದು ಸಮೀಪಿಸಿರುವ ದೃಶ್ಯ ಚಿತ್ರ–1ರಲ್ಲಿದೆ. ಅತ್ಯಂತ ಇತ್ತೀಚೆಗೆ ಹೀಗೆಯೇ ಧೂಮಕೇತುವೊಂದನ್ನು ಸಮೀಪಿಸಿ ವ್ಯೋಮನೌಕೆಯೊಂದು ಆ ಧೂಮಕೇತುವಿನ ಮೇಲೆ ಲ್ಯಾಂಡರ್ವೊಂದನ್ನೂ ಯಶಸ್ವಿಯಾಗಿ ಇಳಿಸಿದ ಮಹಾನ್ ಸಾಧನೆ ಸಂಭವಿಸಿದ್ದು ಗೊತ್ತಲ್ಲ?
ಅ. ಆ ಅದ್ಭುತ ವ್ಯೋಮನೌಕೆಯ ಹೆಸರೇನು?
ಬ. ಆ ವ್ಯೋಮನೌಕೆಯನ್ನು ಕಳುಹಿದ ವೈಜ್ಞಾನಿಕ ಸಂಸ್ಥೆ ಯಾವುದು?
2. ಕ್ಷುದ್ರಗ್ರಹಗಳು ನಿಮಗೆ ಗೊತ್ತು ತಾನೇ? ನಮ್ಮ ಚಂದ್ರನ ಗಾತ್ರಕ್ಕೆ ಹೋಲಿಸಿದಂತೆ ಕೆಲ ಕ್ಷುದ್ರಗ್ರಹಗಳು ಚಿತ್ರ–2ರಲ್ಲಿವೆ. ಕ್ಷುದ್ರಗ್ರಹಗಳನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿ ಅಲ್ಲ?
ಅ. ಗುಂಡಾಗಿಲ್ಲದ ಇತರ ಆಕಾರಗಳ ಕ್ಷುದ್ರಗ್ರಹಗಳೂ ಇವೆ.
ಬ. ಎಲ್ಲ ಕ್ಷುದ್ರಗ್ರಹಗಳೂ ಸೂರ್ಯನನ್ನೇ ಪರಿಭ್ರಮಿಸುತ್ತಿವೆ. 
ಕ. ಕ್ಷುದ್ರಗ್ರಹಗಳು ಒಟ್ಟು ಸಾವಿರಾರು ಸಂಖ್ಯೆಯಲ್ಲಿವೆ.
ಡ. ಎಲ್ಲ ಕ್ಷುದ್ರಗ್ರಹಗಳೂ ಭೂಮಿಗೆ ಅಪಾಯ ತರುತ್ತವೆ.
ಇ. ಕೆಲವಾರು ಕ್ಷುದ್ರಗ್ರಹಗಳು ಅಮೂಲ್ಯ ನಿಧಿ– ನಿಕ್ಷೇಪಭರಿತವಾಗಿವೆ.
3. ನಮ್ಮ ಸೌರವ್ಯೂಹದ ಅತ್ಯಂತ ಬಿಸಿ ಪರಿಸರದ ಗ್ರಹದ ಮೇಲಿನ ಪರ್ವತವೊಂದರ ದೃಶ್ಯ ಚಿತ್ರ–3 ರಲ್ಲಿದೆ. ಆ ಗ್ರಹ ಯಾವುದು?
ಅ. ಮಂಗಳ                                               ಬ. ಶುಕ್ರ
ಕ. ಸೂರ್ಯ                                               ಡ. ಬುಧ
4. ನ್ಯೂಜಿಲ್ಯಾಂಡ್ನಲ್ಲಷ್ಟೇ ನೆಲೆಸಿರುವ, ಹಾರದ ಹಕ್ಕಿಗಳ ಗುಂಪಿಗೇ ಸೇರಿದ ಸುಪ್ರಸಿದ್ಧ ಗಿಣಿ ಪ್ರಭೇದ ಚಿತ್ರ–4ರಲ್ಲಿದೆ. ಮನುಷ್ಯರ ಹಾವಳಿಯಿಂದ ಅಲ್ಪಸಂಖ್ಯಾತವೂ ಆಗಿರುವ ಈ ಗಿಣಿ ಯಾವುದು?
ಅ. ಮಕಾ                                                 ಕ. ಪ್ಯಾರಾಕೀಟ್
ಬ. ಲವ್ಬರ್ಡ್                                              ಡ. ಕಕಾಪೋ
5. ಸುಂದರ, ವರ್ಣಮಯ ಸ್ವರೂಪದ ನೈಸರ್ಗಿಕ ಬೃಹತ್ ಬಂಡೆಯೊಂದು ಚಿತ್ರ–5ರಲ್ಲಿದೆ. ಈ ಶಿಲೆಯನ್ನು ಗುರುತಿಸಬಲ್ಲಿರಾ?
ಅ. ಮರಳು ಶಿಲೆ                                        ಬ. ಅಮೃತ ಶಿಲೆ
ಕ. ಗ್ರಾನೈಟ್ ಶಿಲೆ                                      ಡ. ಸುಣ್ಣ ಶಿಲೆ
6. ಚಿತ್ರ–6ರಲ್ಲಿರುವ ವಿಶಿಷ್ಟ ವಾಹನವನ್ನು ಗಮನಿಸಿ.  ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ ಈ ವಾಹನ ಗೊತ್ತೇ?
ಅ. ವಿಮಾನ ವಾಹಕ ನೌಕೆ
ಬ. ಜಲಾಂತರ್ಗಾಮಿ
ಕ. ಹಾವರ್–ಕ್ರಾಫ್ಟ್
ಡ. ಫ್ರಿಗೇಟ್
7. ಇಡೀ ಸೌರವ್ಯೂಹದಲ್ಲಿ ಗರಿಷ್ಠ ಪ್ರಮಾಣದ ಜ್ವಾಲಾಮುಖಿ ಚಟುಚಟಿಕೆ ನಡೆಯುತ್ತಿರುವ ಸುಪ್ರಸಿದ್ಧ ಚಂದ್ರ ‘ಅಯೋ’ದ ಒಂದು ದೃಶ್ಯ ಚಿತ್ರ–7ರಲ್ಲಿದೆ. ಇದು ಯಾವ ಗ್ರಹದ ಉಪಗ್ರಹ ಹೇಳಬಲ್ಲಿರಾ?
ಅ. ಶನಿ ಗ್ರಹ                                ಬ. ಗುರು ಗ್ರಹ
ಕ. ಯುರೇನಸ್                             ಡ. ನೆಪ್ಚೂನ್
8. ಭೌತ ವಿಜ್ಞಾನ ಕ್ಷೇತ್ರದ ಎರಡು ಯುಗಪ್ರವರ್ತಕ ‘ಶೋಧ’ಗಳಾದ ‘ಕ್ವಾಂಟಂ ಸಿದ್ಧಾಂತ’ ಮತ್ತು ‘ಅನಿಶ್ಚಿತತಾ ತತ್ವ’ಗಳನ್ನು ರೂಪಿಸಿದ ವಿಶ್ವ ಪ್ರಸಿದ್ಧ ವಿಜ್ಞಾನಿಗಳ ಭಾವಚಿತ್ರಗಳು ಕ್ರಮವಾಗಿ ಚಿತ್ರ–8 ಮತ್ತು ಚಿತ್ರ–9 ರಲ್ಲಿವೆ. ಈ ವಿಜ್ಞಾನಿಗಳನ್ನು ಕೆಳಗಿನ ಪಟ್ಟಿಯಲ್ಲಿ ಗುರುತಿಸಿ:
ಅ. ನೀಲ್ಸ್ ಭೋರ್
ಬ. ರುದರ್ಫೋರ್ಡ್
ಕ. ಮ್ಯಾಕ್ಸ್ ಪ್ಲಾಂಕ್
ಡ. ಸರ್ ಸಿ.ವಿ. ರಾಮನ್
ಇ. ಸುಬ್ರಹ್ಮಣ್ಯ ಚಂದ್ರಶೇಖರ್
ಈ. ವರ್ನರ್ ಹೈಸನ್ಬರ್ಗ್
9. ಸುಂದರ ರೂಪದ ಪಾತರಗಿತ್ತಿಯೊಂದು ಚಿತ್ರ– 10ರಲ್ಲಿದೆ. ಚಿಟ್ಟೆಗಳ ಲೋಕದಲ್ಲಿ ಅತ್ಯಂತ ವಿಸ್ಮಯದ
ವಲಸೆ ಪಯಣ ಕೈಗೊಳ್ಳುವ ಜಗತ್ಪ್ರಸಿದ್ಧ ಚಿಟ್ಟೆ ಇವುಗಳಲ್ಲಿ ಯಾವುದು?
ಅ. ಹೆಲಿಕೋನಿಯಸ್                             ಬ. ಸ್ಪಾಲೋ ಟೈಲ್ ಚಿಟ್ಟೆ
ಕ. ಬರ್ಡ್ ವಿಂಗ್ ಚಿಟ್ಟೆ                           ಡ. ಮೋನಾರ್ಕ್ ಚಿಟ್ಟೆ
10. ಉತ್ತರ ದಿಕ್ಕಿನಿಂದ ಹಿಮಾಲಯ ಪರ್ವತ ಪಂಕ್ತಿಯನ್ನು ದಾಟಿ ಪ್ರತಿವರ್ಷ ಭಾರತಕ್ಕೆ ವಲಸೆ ಬಂದು ಹಿಂದಿರುಗುವ
ಪ್ರಸಿದ್ಧ ಹಕ್ಕಿ ಚಿತ್ರ–11 ರಲ್ಲಿದೆ. ಈ ಖಗವಲಸಿಗ ಗೊತ್ತೇ? 
ಅ. ಆರ್ಕ್ಟಿಕ್ ಟರ್ನ್
ಬ. ಸೈಬೀರಿಯನ್ ಕ್ರೇನ್
ಕ. ಪೈಂಟೆಡ್ ಸ್ಟಾರ್ಕ್
ಡ. ಪೆಲಿಕನ್
ಇ. ಸ್ಪೂನ್ ಬಿಲ್
11. ಕಡಲಿನ ಆಮೆಯೊಂದು ಚಿತ್ರ–12ರಲ್ಲಿದೆ. ಕಡಲಾಮೆಗಳ ಎಲ್ಲ ಪ್ರಭೇದಗಳೂ ಕಡಲಂಚಿನ ಮರಳಿನ ತೀರದಲ್ಲೇ ಮೊಟ್ಟೆ ಇಡುತ್ತವೆ ಹೌದಲ್ಲ? ಹಾಗೆ ನಮ್ಮ ದೇಶದ ಆಂಧ್ರ ಮತ್ತು ಒರಿಸ್ಸಾ ರಾಜ್ಯಗಳ ಕಡಲ ತೀರಗಳಿಗೆ ಪ್ರತಿ ವರ್ಷ ಮೊಟ್ಟೆ ಇಡಲು ಬರುವ ಕಡಲಾಮೆ ವಿಧ?
ಅ. ಆಲಿವ್ ರಿಡ್ಲೀ
ಬ. ದಿ ಲೆದರ್ ಬ್ಯಾಕ್
ಕ. ದಿ ಲಾಗರ್ ಹೆಡ್
ಡ. ದಿ ಗ್ರೀನ್ ಟರ್ಟಲ್
12. ನಮ್ಮ ಸೂರ್ಯನಷ್ಟೇ ದ್ರವ್ಯರಾಶಿಯ ನಕ್ಷತ್ರವೊಂದರ ಬದುಕಿನ ಅಂತಿಮ ಹಂತದಲ್ಲಿ ಸಂಭವಿಸಿರುವ ವಿದ್ಯಮಾನದ, ಎಂದರೆ ‘ಗ್ರಹೀಯ ನೀಹಾರಿಕೆ’ಯೊಂದು ರೂಪುಗೊಂಡಿರುವ ದೃಶ್ಯ ಚಿತ್ರ13 ರಲ್ಲಿದೆ. ಇಂಥ ಸಂದರ್ಭಗಳಲ್ಲಿ ನೀಹಾರಿಕೆಯ ಕೇಂದ್ರಭಾಗದಲ್ಲಿ ಸಾಂದ್ರ ರೂಪದಲ್ಲಿ ಉಜ್ವಲ ಕಾಂತಿಯೊಡನೆ ಕಾಣಸಿಗುವ ‘ನಕ್ಷತ್ರ ಶೇಷಾಂಶ’ದ ಹೆಸರೇನು?
ಅ. ನ್ಯೂಟ್ರಾನ್ ತಾರೆ
ಬ. ಶ್ವೇತ ಕುಬ್ಜ
ಕ. ಕಂದು ಕುಬ್ಜ
ಡ. ಕೆಂಪು ದೈತ್ಯ
13. ಹೊಂದಿಸಿ ಕೊಡಿ:
1. ಪಾಂಪೆರೋ              ಅ. ಪರಮಾಣು ಕಣ
2. ಪಾಂಪಾಸ್               ಬ. ಸಾಗರ ಪ್ರವಾಹ
3. ಆಲ್ಡಬ್ರಾನ್                ಕ. ಲೋಹ
4. ನ್ಯೂಟ್ರಿನೋ              ಡ. ಮರುಭೂಮಿ
5. ಯುರೇನಿಯಂ            ಇ. ಮಾರುತ
6. ಆಸ್ಪಿರಿನ್                  ಈ. ಖನಿಜ
7. ರಂಜಕ                     ಉ. ಔಷಧ ರಾಸಾಯನಿಕ
8. ಗಲ್ಪ್ ಸ್ಟ್ರೀಮ್             ಟ. ಹುಲ್ಲು ಬಯಲು
9. ನಾಮಿಬ್                   ಣ. ಅಲೋಹ
10. ಟಾಲ್ಕ್                    ಸ. ನಕ್ಷತ್ರ
ಉತ್ತರಗಳು:
1. ಅ–ರೊಸೆಟ್ಟಾ; ಬ–ಯೂರೋಪಿಯನ್ ಸ್ಪೇಸ್ ಏಜನ್ಸಿ (ಈಸಾ)
2. ‘ಡ’– ತಪ್ಪು ಹೇಳಿಕೆ
3. ಬ– ಶುಕ್ರಗ್ರಹ
4. ಡ–ಕಕಾವೋ
5. ಅ–ಮರಳು ಶಿಲೆ
6. ಕ–ಹಾವರ್ ಕ್ರಾಫ್ಟ್
7. ಬ–ಗುರುಗ್ರಹ
8. ಚಿತ್ರ–8: ಮ್ಯಾಕ್ಸ್ ಪ್ಲಾಂಕ್; 9–ಹೈಸನ್ ಬರ್ಗ್
9. ಡ–ಮೋನಾರ್ಕ್ ಚಿಟ್ಟೆ
10. ಬ–ಸೈಬೀರಿಯನ್ ಕ್ರೇನ್
11. ಅ. ಆಲಿವ್ ರಿಡ್ಲೀ
12. ಬ–ಶ್ವೇತ ಕುಬ್ಜ
13. 1–ಇ; 2–ಟ; 3–ಸ; 4–ಅ; 5–ಕ; 6–ಉ; 7–ಣ; 8–ಬ; 9–ಡ;
10–ಈ
ಸೌರವ್ಯೂಹ
1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು ‘ವಿಶ್ವ ಅಥವಾ ಬ್ರಹ್ಮಾಂಡ’ ಎನ್ನುವರು.
2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು.
3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ ‘ನಕ್ಷತ್ರ’ಗಳೆಂದು ಕರೆಯಲಾಗಿದೆ.
4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು.
5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು ‘ಸೂಪರ್ ನೋವಾ’ ಎನ್ನುವರು.
6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ.
7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್
8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು. 
9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು. 
10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ.
11. ಸೂರ್ಯನು ಇರುವ ಕ್ಷೀರಪಥ ‘ಆ್ಯಂಡ್ರೋಮೆಡ್ ಗ್ಯಾಲಾಕ್ಸಿ’
12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ, ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ
13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು ‘ಜ್ಯೋತಿರ್ವರ್ಷ’ ಎನ್ನುವರು.
14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ದೂರದಲ್ಲಿ ಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷ ಎನ್ನುವರು.
15. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು  ‘ಅಸ್ಟ್ರನಾಮಿಕಲ್ ಯೂನಿಟ್’ ಎನ್ನುವರು.
16. ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ ಪರಿವಾರವನ್ನು ‘ಸೌರವ್ಯೂಹ’ ಎಂದು ಕರೆಯುವರು.
17. ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು ಹೀಲಿಯಂ ಹಾಗೂ ಉಳಿದ ಭಾಗವು ಇತರ ಅನಿಲಗಳಿಂದ ಕೂಡಿದೆ.
18. ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೂರ್ಯ ಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿ ಹ್ಯಾಲೆಯು ಸಂಶೋದಿಸಿದನು.
19. ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ ಸೂತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ ಸೂತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸೂತ್ತಲೂ ಬಳೆಯಾಕಾರದ ‘ ಪೋಟೋ ಸ್ಪಿಯರ ಎಂದು ಕರೆಯುವರು.
20. ಸೂರ್ಯನ ಮೇಲ್ಬಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು ಕರೆಯುವರು.
21. ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು ಸೂರ್ಯನ ಪ್ರಕಾಶವನ್ನು ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸೂತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.
22. ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ.
23. ಸೂರ್ಯನ ಸೂತ್ತಲೂ 8 ಗ್ರಹಗಳು ಸೂತ್ತುತ್ತವೆ. ಅವೆಂದರೆ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು
ನೆಪ್ಚೂನ್.
24. ಅಗಸ್ಟ 24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಗ್ರಹವನ್ನು ಗ್ರಹವಲ್ಲ ಎಂದು ತಿಮರ್ಾನಿಸಲಾಯಿತು.
25. ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ. ಇದು ಅತೀ ಹೆಚ್ಚು ಉಷ್ಣಾಂಶದಿಂದ ಕೂಡಿದೆ.
26. ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸೂತ್ತ ಸುತ್ತುತ್ತದೆ.
27. ಗುರು ಗ್ರಹವು ಅತೀ ದೊಡ್ಡದಾದ ಗ್ರಹ. ಇದು ಅತೀ ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ. ಇದರ ಒಂದು ದಿನ 9
ಗಂಟೆ 50 ನಿಮಿಷ ಮಾತ್ರ .
28. ಶನಿ ಗ್ರಹವು ತನ್ನ ಸೂತ್ತ ಸುಂದರವಾದ ಬಳೆಗಳನ್ನು ಹೊಂದಿದೆ.
29. ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು ಆಂತರಿಕ ಗ್ರಹಗಳು ಅಥವಾ ಶಿಲಾಗ್ರಹಗಳು ಎಂದು ಕರೆಯುವರು.
ಇವುಗಳ ಸಾಂದ್ರತೆ ಅತಿ ಹೆಚ್ಚು.
30. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು ಬಾಹ್ಯ ಗ್ರಹಗಳು ಅಥವಾ ಜೋವಿಯಾನ್ ಗ್ರಹಗಳೆಂದೂ
ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ.
31. ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂ ಸೀರಿಸ್.
32. ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂ ಕಡಿಮೆ 88 ದಿನಗಳು.
33. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ ಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ
ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚು.
34. ಭೂಮಿಯ ಏಕೈಕ ನೈಸಗರ್ಿಕ ಉಪಗ್ರಹ ಚಂದ್ರ.
35. ಮಂಗಳ ಗ್ರಹವನ್ನು ‘ಕೆಂಪು ಗ್ರಹ’ ಕುಜ ಅಥವಾ ಅಂಗಾರಕವೆಂತಲೂ ಕರೆಯುವರು.
36. ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ ಎರಡು ಚಿಕ್ಕ ಉಪ ಗ್ರಹಗಳನ್ನು ಹೊಂದಿದೆ.
37. ಭಾರತವು ಮಂಗಳ ಗ್ರಹವನ್ನು ಶೋಧಿಸುವ ಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸ
ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ ಮತ್ತು ಯೂರೋಪಗಳ ಒಕ್ಕೂಟದ ನಂತರ ನಾಲ್ಕನೆಯದಾಗಿದೆ.
38. ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ ದೊಡ್ಡದು. ಇದನ್ನು ಮತ್ತು ಇದರ ಉಪ ಗ್ರಹಗಳನ್ನು ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.
39. ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ ಗ್ರಹಗಳನ್ನು ಹೊಂದಿದೆ, (ಗುರು-60, ಶನಿ-50, ಯೂರೇನೆಸ್-25)
40. ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು ಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡ ಮತ್ತು
ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು.
41. ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ ಉಪ ಗ್ರಹಗಳಲ್ಲಿ ಅತೀ ದೊಡ್ಡದು. ಐಓ ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ.  
42. ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ ಸುಂದರವಾದ ಗ್ರಹ. ಇದರ ಸೂತ್ತಲೂ ಮೂರು ಬಳೆಗಳಿವೆ. ಶನಿ
ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, ಡಿಯೋನ್, ಮತ್ತು ರಿಯಾ. 
43. ಯುರೆನೇಸ್ ಗ್ರಹವು ಗಾಡ ನೀಲಿ ಬಣ್ಣವನ್ನು ಹೊಂದಿರುವುದು ಇದರ ವಾಯುಮಂಡಲದಲ್ಲಿ ಮಿಥೇನ ಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆ ಮೂಲ ಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾ ಉಪಗ್ರಹಗಳಿಗೆ ಷೇಕ್ಸ್ ಪಿಯರನ ನಾಟಕದ ಪಾತ್ರಧಾರಿಗಳ ಹೆಸರನ್ನು ನೀಡಲಾಗಿದೆ.
44. ಬುಧ ಮತ್ತು ಶುಕ್ರ ಗ್ರಹಗಳು ಯಾವುದೇ ಉಪಗ್ರಹಗಳನ್ನು ಹೊಂದಿರುವುದಿಲ್ಲ.
45. ಸೌರವ್ಯೂಹದ ಉಪಗ್ರಹಗಳಲ್ಲಿ ಗುರು ಗ್ರಹದ ಗ್ಯಾನಿಮೇಡ್ ಅತಿ ದೊಡ್ಡದು. ಶನಿ ಗ್ರಹದ ಇಯಾಪಿಟಸ್ ಅತೀ ಚಿಕ್ಕದು.
46. ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು
ವಸ್ತುಗಳಿಗೆ ‘ಉಲ್ಕೆಗಳು’ ಎಂದು ಕರೆಯುವರು.
47. ಉಲ್ಕೆಗಳು ಪೂರ್ಣವಾಗಿ ಉರಿದು ಹೋಗದೆ ಅವುಗಳ ಭೂಮಿಯ ಮೇಲೆ ಬೀಳುತ್ತವೆ ಅವುಗಳನ್ನು ಉಲ್ಕಾಶಿಲೆಗಳು
ಎನ್ನುವರು. ಭೂಮಿಗೆ ತಲುಪಿರುವ ಉಲ್ಕಾಶಿಲೆಗಳಲ್ಲಿ ನಮೀಬಿಯಾದ ಹೋಬಾವೆಸ್ಟನಲ್ಲಿರುವ ಹಾಗೂ ಆಸ್ಟ್ರೇಲಿಯಾದ ಹೆನ್ಚುರಿ ತಗ್ಗುಗಳು.
48. ಕ್ಷುದ್ರಗಳು ಮಂಗಳು ಮತ್ತು ಗುರುಗ್ರಹಗಳ ನಡುವೆ ಸೂರ್ಯನ ಸೂತ್ತಲೂ ಸುತ್ತುತ್ತಿವೆ. ಸೀರಿಸ್ ಸೌರವ್ಯೂಹದ
ಅತೀ ದೊಡ್ಡ ಕ್ಷುದ್ರಗ್ರಹ.
49. ಧೂಮಕೇತುಗಳು ಪ್ರಜ್ವಲಿಸುವ ತಲೆ ಹಾಗೂ ಉದ್ದವಾದ ಬಾಲವನ್ನು ಹೊಂದಿವೆ. ಹ್ಯಾಲೆ ಧೂಮಕೇತುವು 76
ವರ್ಷಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ.
50. 1956 ರಲ್ಲಿ ರಷ್ಯಾದ ಲೂನಿಕ್-2 ಚಂದ್ರನನ್ನು ತಲುಪಿದ ಮೊದಲ ಬಾಹ್ಯಾಕಾಶ ನೌಕೆ. 1969 ರಲ್ಲಿ ಆರ್ಮಸ್ಟ್ರಾಂಗ್ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ.
51. ಚಂದ್ರನು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಅಂಡಾಕಾರವಾಗಿ ಸೂತ್ತುತ್ತಾ ಭೂಮಿಗೆ ಸಮೀಪಿಸುವುದನ್ನು ‘ಪೆರಿಜಿ’ ಅಥವಾ ಉಚ್ಚಸ್ಥಾನವೆಂದೂ ಹಾಗೂ ಭೂಮಿಯಿಂದ ಗರಿಷ್ಠ ದೂರವಿರುವುದನ್ನು ‘ಅಪೋಜಿ’ ಅಥವಾ ನೀಚಸ್ಥಾನ ಎನ್ನುವರು.
52. ಚಂದ್ರನು ಭೂಮಿಯ ಸೂತ್ತ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಬೇಕಾಗುವ ಅವಧಿ 29 ದಿನ 12 ಗಂಟೆ 44 ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ 
53. ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾ ಹುಣ್ಣಿಮೆಯ ದಿನಗಳಂದು ಚಂದ್ರಗ್ರಹಣವಾಗುವುದಿಲ್ಲ.
54. ಸೂರ್ಯ ಗ್ರಹಣವು ಅಮವಾಸ್ಯೆಯ ದಿನದಂದು ಮಾತ್ರ ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿ ಕಂಡು ಬರುತ್ತದೆ.
1) ಪೂರ್ಣ ಸೂರ್ಯಗ್ರಹಣ 2) ಪಾಶ್ವ ಸೂರ್ಯಗ್ರಹಣ ಹಾಗೂ 3) ಕಂಕಣ ಸೂರ್ಯಗ್ರಹಣ.
55. ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣವಾಗುತ್ತೆ

No comments:

Post a Comment