Anand Unnibhavi
Thursday, July 30, 2020
ವಾರದ ವಿಜ್ಞಾನ ಪ್ರಯೋಗಗಳು
Saturday, July 18, 2020
ಮೊಬೈಲ್ ಮತ್ತು ಮನಃಶಾಂತಿ
ಮೊಬೈಲ್ ಮತ್ತು ಮನಃಶಾಂತಿ
ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್ ಇದೆಯೆಂದ ತಕ್ಷಣ ಅದು ಲೇಟೆಸ್ಟ್ ವೆಬ್ ಸೀರೀಸ್ ನೋಡಲಷ್ಟೇ ಬಳಕೆಯಾಗಬೇಕು ಎಂದೇನೂ ಇಲ್ಲ, ಮನಃಶಾಂತಿಯ ಹುಡುಕಾಟಕ್ಕೂ ಅದು ಮಾರ್ಗದರ್ಶನ ಮಾಡಬಹುದು.
ನಿತ್ಯದ ಬದುಕಿನ ಬಹುತೇಕ ಕೆಲಸಗಳಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವುದು ಇದೀಗ ಸಾಮಾನ್ಯವಾಗಿರುವ ಸಂಗತಿ. ಮನೆಯ ದಿನಸಿ ತರಿಸುವುದಿರಲಿ, ವಿದ್ಯುತ್ ಸಂಪರ್ಕದ ಶುಲ್ಕ ಪಾವತಿಸುವುದಿರಲಿ, ಮುಂದೆಂದೋ ಹೋಗಬಹುದಾದ ಪ್ರವಾಸವನ್ನು ಯೋಜಿಸುವುದೇ ಇರಲಿ - ಎಲ್ಲದಕ್ಕೂ ನಾವು ಈಗ ಮಾಹಿತಿ ತಂತ್ರಜ್ಞಾನದ ಮೊರೆಹೋಗುತ್ತೇವೆ.
ಕೆಲಸಗಳನ್ನು ಸುಲಭವಾಗಿಸುವುದು, ಬೇಕಾದ್ದನ್ನೆಲ್ಲ ಕುಳಿತ ಕಡೆಗೇ ತಂದು ತಲುಪಿಸುವುದು - ಈ ಸವಲತ್ತುಗಳ ವೈಶಿಷ್ಟ್ಯ ಇಷ್ಟಕ್ಕೇ ಸೀಮಿತವೇನಲ್ಲ. ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದನ್ನು, ನಮಗೆ ಅನುಕೂಲವಾದ ಸಮಯವನ್ನು ನಮಗಿಷ್ಟವಾದ ಕೆಲಸಗಳಿಗೆ ವಿನಿಯೋಗಿಸುವುದನ್ನೂ ಇವು ಸಾಧ್ಯವಾಗಿಸಿವೆ. ಮನರಂಜನೆಯಿಂದ ಮನಃಶಾಂತಿಯವರೆಗೆ ನಾವಿಲ್ಲಿ ಯಾವುದರ ಹುಡುಕಾಟದಲ್ಲಾದರೂ ತೊಡಗಿಕೊಳ್ಳಬಹುದು.
ಇವತ್ತಿನ ಜಗತ್ತಿನಲ್ಲಿ ಮಾನಸಿಕ ಒತ್ತಡ ಮಿತಿಮೀರಿರುವುದರಿಂದಲೋ, ಸಹಜವಾಗಿ ಮೂಡಿದ ಕುತೂಹಲದಿಂದಲೋ ಬಹಳಷ್ಟು ಜನ ಆಧ್ಯಾತ್ಮದತ್ತ ಮುಖಮಾಡಿರುವುದನ್ನು ನಾವು ಇದೀಗ ನೋಡಬಹುದು. ಅದರ ಜೊತೆಗೆ ದೈಹಿಕ ಆರೋಗ್ಯವನ್ನೂ ಚೆನ್ನಾಗಿಟ್ಟುಕೊಳ್ಳಲು ಹಲವು ಮಂದಿ ಯೋಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಧ್ಯಾನ-ಪ್ರಾಣಾಯಾಮಗಳನ್ನೂ ಮಾಡುತ್ತಿದ್ದಾರೆ.
ಯಾವುದಕ್ಕೂ ಟೈಮೇ ಇಲ್ಲ ಎನ್ನುವ ಜನರು ಈ ಹೊಸ ಆಸಕ್ತಿಗಳಿಗೆ ಸಮಯ ಹೊಂದಿಸುವುದು ಹೇಗೆ? ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಈ ಪ್ರಶ್ನೆಗೂ ಉತ್ತರ ಹೇಳುತ್ತಿವೆ.
ಹೌದು, ಟ್ರಾಫಿಕ್ ಜಾಮಿನಲ್ಲಿ ಸಿಲುಕಿರುವ ಬಸ್ಸಿನಲ್ಲಿ ಕುಳಿತಿದ್ದಾಗಲೂ ಆಧ್ಯಾತ್ಮ ಚಿಂತನೆ ಮಾಡುವುದನ್ನು ಸಾಧ್ಯವಾಗಿಸಿದ್ದು ಇದೇ ಮಾಹಿತಿ ತಂತ್ರಜ್ಞಾನ. ಕೈಯಲ್ಲೊಂದು ಮೊಬೈಲು, ಅದಕ್ಕೆ ಅಂತರಜಾಲ ಸಂಪರ್ಕ ಇದ್ದರೆ ಸಾಕು, ಈ ವಿಷಯದ ಬಗ್ಗೆ ಹಲವು ಖ್ಯಾತನಾಮರು ರೂಪಿಸಿರುವ ಸಾಲುಸಾಲು ವೀಡಿಯೊಗಳನ್ನು ಯೂಟ್ಯೂಬಿನಲ್ಲಿ ನೋಡಬಹುದು. ೪೭ ಲಕ್ಷ ಚಂದಾದಾರರಿರುವ ಸದ್ಗುರು, ೮ ಲಕ್ಷ ಚಂದಾದಾರರಿರುವ ಶ್ರೀ ಶ್ರೀ ರವಿಶಂಕರ್ ಮುಂತಾದವರ ಯೂಟ್ಯೂಬ್ ಖಾತೆಗಳನ್ನು ನೋಡಿದರೆ ಈ ಮಾಧ್ಯಮದಲ್ಲಿ ಆಧ್ಯಾತ್ಮ ಕುರಿತ ಮಾಹಿತಿ ಎಷ್ಟು ಜನಪ್ರಿಯವೆನ್ನುವುದು ಅರಿವಾಗುತ್ತದೆ.
ಸಮಯ ಹಾಳುಮಾಡುವ ದಾರಿಯೆಂಬ ಅಪಖ್ಯಾತಿಗೆ ಗುರಿಯಾಗಿರುವ ಫೇಸ್ಬುಕ್ನಲ್ಲೂ ಈ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳು - ಸಂಸ್ಥೆಗಳು ಸಕ್ರಿಯರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಫೇಸ್ಬುಕ್ ಪುಟವನ್ನು ಇಷ್ಟಪಟ್ಟಿರುವವರ ಸಂಖ್ಯೆ ಇಪ್ಪತ್ತಮೂರು ಲಕ್ಷಕ್ಕೂ ಹೆಚ್ಚು! ಈ ಹಿಂದೆಯೇ ಸಿದ್ಧಪಡಿಸಿದ ಮಾಹಿತಿಯ ಪ್ರಕಟಣೆ ಮಾತ್ರವಲ್ಲದೆ ಫೇಸ್ಬುಕ್ ಹಾಗೂ ಯೂಟ್ಯೂಬ್ ವೇದಿಕೆಗಳು ಹೊಸ ಕಾರ್ಯಕ್ರಮಗಳ ನೇರಪ್ರಸಾರಕ್ಕೂ ಬಳಕೆಯಾಗುತ್ತಿರುವುದು ವಿಶೇಷ. ಇವೆರಡು ವೇದಿಕೆಗಳಷ್ಟೇ ಅಲ್ಲದೆ ಇನ್ಸ್ಟಾಗ್ರಾಮ್, ಟ್ವಿಟರ್, ಲಿಂಕ್ಡ್ಇನ್, ಹೆಲೋ ಮುಂತಾದ ವೇದಿಕೆಗಳಲ್ಲೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಖಾತೆಗಳು-ಪುಟಗಳು ಸಾಕಷ್ಟು ಹೆಸರುಮಾಡಿವೆ.
ಇಷ್ಟೆಲ್ಲ ಜನರು ಆಸಕ್ತರಾಗಿದ್ದಾರೆ ಎಂದೇ ಈ ಕ್ಷೇತ್ರದಲ್ಲಿ ಕೆಲವು ನವೋದ್ಯಮಗಳೂ (ಸ್ಟಾರ್ಟಪ್) ಪ್ರಾರಂಭವಾಗಿವೆ. ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸಗಳಿಂದ ಪ್ರಾರಂಭಿಸಿ ಅವೆಲ್ಲವೂ ಸೇರಿದ ಸಂಪೂರ್ಣ ಫಿಟ್ನೆಸ್ ಪ್ಯಾಕೇಜುಗಳವರೆಗೆ ಈ ನವೋದ್ಯಮಗಳು ಹಲವು ವಿಧದ ಸೇವೆಗಳನ್ನು ಒದಗಿಸುತ್ತಿರುವುದು ವಿಶೇಷ.
ಹೀಗೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಈಗಾಗಲೇ ಹಲವು ವಿಧಗಳಲ್ಲಿ ಬಳಸುತ್ತಿದ್ದ ಈ ಕ್ಷೇತ್ರ ಡಿಜಿಟಲ್ ಜಗತ್ತಿಗೆ ಇನ್ನಷ್ಟು ಹತ್ತಿರವಾಗಿದ್ದು ಕೋವಿಡ್-೧೯ ತಂದುಕೊಟ್ಟ ಲಾಕ್ಡೌನ್ ಸಂದರ್ಭದಲ್ಲಿ. ಓಡಾಟದ ಮೇಲಿನ ನಿಷೇಧದಿಂದ ನೇರ ತರಗತಿಗಳನ್ನು ನಡೆಸಲು ಸಾಧ್ಯವಾಗದಿದ್ದಾಗ, ಇನ್ನಿತರ ಕ್ಷೇತ್ರಗಳಂತೆ ಇಲ್ಲಿಯೂ ಆನ್ಲೈನ್ ತರಗತಿಗಳು ಪ್ರಾರಂಭವಾದವು. ಫೇಸ್ಬುಕ್ ಲೈವ್, ಯೂಟ್ಯೂಬ್ ಲೈವ್, ಗೂಗಲ್ ಹ್ಯಾಂಗೌಟ್ಸ್, ಜ಼ೂಮ್ ಮುಂತಾದ ಸವಲತ್ತುಗಳಷ್ಟೇ ಅಲ್ಲದೆ ವಾಟ್ಸಾಪ್ ವೀಡಿಯೋ ಕಾಲ್ನಂತಹ ಚಿರಪರಿಚಿತ ಮಾರ್ಗಗಳೂ ಆಸಕ್ತರ ನೆರವಿಗೆ ಬಂದವು.
ಈಗಾಗಲೇ ಕಲಿಯುತ್ತಿದ್ದವರಿಗೆ ಮುಂದಿನ ವಿಷಯಗಳನ್ನು ತಲುಪಿಸುವುದಷ್ಟೇ ಅಲ್ಲದೆ, ಲಾಕ್ಡೌನ್ ಸಂದರ್ಭದಲ್ಲಿ ಹೊಸತೇನಾದರೂ ಮಾಡಬೇಕು ಅಂದುಕೊಂಡವರಿಗೂ ಈ ಮಾರ್ಗಗಳು ತೆರೆದುಕೊಂಡಿದ್ದು ವಿಶೇಷ. ಕೋವಿಡ್-೧೯ರ ಸಂದರ್ಭದಲ್ಲಿ ಬೇರೆಬೇರೆ ವಿಷಯಗಳಿಗೆ ಸಂಬಂಧಪಟ್ಟ ವೆಬಿನಾರ್ಗಳು ದೊಡ್ಡಸಂಖ್ಯೆಯಲ್ಲಿ ನಡೆದದ್ದು ನಮಗೆಲ್ಲ ಗೊತ್ತೇ ಇದೆ. ಇದೇ ಸಂದರ್ಭದಲ್ಲಿ 'ಆನ್ಲೈನ್ ಬ್ರೆತ್ ಆಂಡ್ ಮೆಡಿಟೇಶನ್ ಪ್ರೋಗ್ರಾಮ್', 'ಪ್ರಾಣಾಯಾಮ ಪ್ರಾಕ್ಟೀಸ್', 'ಪವರ್ ಯೋಗ' ಮುಂತಾದ ಕಾರ್ಯಕ್ರಮಗಳೂ ಶುರುವಾಗಲು ಮಾಹಿತಿ ತಂತ್ರಜ್ಞಾನದ ಅದೇ ಸವಲತ್ತುಗಳು ನೆರವಾಗಿವೆ. ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್ ಇದೆಯೆಂದ ತಕ್ಷಣ ಅದು ಲೇಟೆಸ್ಟ್ ವೆಬ್ ಸೀರೀಸ್ ನೋಡಲಷ್ಟೇ ಬಳಕೆಯಾಗಬೇಕು ಎಂದೇನೂ ಇಲ್ಲ, ಮನಃಶಾಂತಿಯ ಹುಡುಕಾಟಕ್ಕೂ ಅದು ಮಾರ್ಗದರ್ಶನ ಮಾಡಬಹುದೆಂದು ತೋರಿಸಿಕೊಟ್ಟಿವೆ.
Thursday, January 16, 2020
ಗಣರಾಜ್ಯೋತ್ಸವ ದಿನ – 10 ವಿಷಯ ನಿಮ್ಮarticle
ದೇಶಭಕ್ತಿಯು ಕಾಲೋಚಿತ ಅಥವಾ ವಯಸ್ಸಿನ ಮೇಲೆ ಅವಲಂಬಿತವಾಗಿರುವ ವಿಷಯವಲ್ಲ. ನಮ್ಮ ಮಕ್ಕಳು ಸ್ವತಂತ್ರ ನಾಗರಿಕರಾಗಿ ಬೆಳೆಯಲು, ನಮ್ಮ ದೇಶವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪಟ್ಟಿರುವ ಶ್ರಮ, ತ್ಯಾಗ ಹಾಗು ಕಷ್ಟಗಳ ಜ್ಞಾನವನ್ನು ನಾವು ಅವರಿಗೆ ತಿಳಿಸಿಕೊಡಬೇಕು. ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಹೋರಾಟದ ಬಗ್ಗೆ ಆವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಯೋಧರು ಮತ್ತು ಮುಖಂಡರು ಭಾರತವನ್ನು ಬಹಳಷ್ಟು ಪ್ರಯತ್ನ ಹಾಗು ಹೋರಾಟಗಳನ್ನು ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಿಮ್ಮ ಮಕ್ಕಳು ಇದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಚಿಕ್ಕವರು ಎಂದು ಭಾವಿಸಬೇಡಿ. ಇದನ್ನು ನಮ್ಮ ಮಕ್ಕಳಿಗೆ ಗಣರಾಜ್ಯೋತ್ಸವ ಸಂಧರ್ಭದಲ್ಲಿ ತಿಳಿಸುವ ಪ್ರಯತ್ನ ಮಾಡೋಣ.1. ಗಣರಾಜ್ಯ/ ತಂತ್ರ ಎಂದರೇನು ?
ಗಣರಾಜ್ಯ / ರಿ ಪಬ್ಲಿಕ್– ಎಂದರೆ ಎಲ್ಲಾ ವಿಷಯಗಳು ಸಾರ್ವಜನಿಕವಾಗಿರುವುದು (ಪಾರದರ್ಶಕವಾಗಿರುವುದು ). ಅಂದರೆ ಒಂದು ಗಣರಾಜ್ಯ ದೇಶದಲ್ಲಿ ಸರ್ಕಾರ ಜನರಿಂದ ರಚನೆಯಾಗಿರುತ್ತದೆ, ಜನರ ಎಲ್ಲಾ ವಿಷಯಗಳನ್ನು ಪರಿಗಣಿಸುವುದರ ಮೂಲಕ ಕಾಳಜಿ ವಹಿಸಲಾಗುತ್ತದೆ. ಗಣರಾಜ್ಯ ರಾಷ್ಟ್ರವನ್ನು ರಾಜನು ಆಳುವುದಿಲ್ಲ.ಆಡಳಿತ ರಾಜನ ಆಳ್ವಿಕೆಗಿಂತ ಉತ್ತಮವಾಗಿರುತ್ತದೆ.2. ಗಣರಾಜ್ಯೋತ್ಸವ ದಿನ ಏನನ್ನು ಸೂಚಿಸುತ್ತದೆ?
3. ದಿನಾಂಕ
- ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.
- 1930 ರಲ್ಲಿ ಭಾರತ ಸರ್ಕಾರದ ಕಾಯಿದೆ ಬದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ರಚಿಸಲಾದ ಭಾರತದ ಆಡಳಿತ ಕಾಯಿದೆಯ ದಾಖಲೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು.
- 1950 ರಲ್ಲಿ ಪೂರ್ಣಸ್ವಾರಾಜ್ ಎಂದು ಘೋಷಿಸಲಾಯಿತು ಹೀಗಾಗಿ 26 ನೇ ಜನವರಿ ರಾಷ್ಟ್ರೀಯ ರಜಾದಿನವಾಗಿ ಘೋಷಿಸಲಾಗಿದೆ.
4. ಸಂವಿಧಾನ ಎಂದರೇನು?
ಸಂವಿಧಾನವೆಂದರೆ ಭಾರತದ ಎಲ್ಲಾ ನಾಗರಿಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿಸಲಾಗಿರುವ ಕಾಯಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಇಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರುವುದು.5. ಸಂವಿಧಾನವನ್ನು ರಚಿಸಿದವರು ಯಾರು?

- ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದವರು.
- ಭಾರತೀಯ ಸಂವಿಧಾನವು ವಿಶ್ವದ ಅತಿ ಉದ್ದವಾದ ಸಂವಿಧಾನವಾಗಿದ್ದು, ಇದರಲ್ಲಿ 22 ಭಾಗಗಳಲ್ಲಿ, 12 ವಿವರ ಪಟ್ಟಿ ಮತ್ತು 97 ತಿದ್ದುಪಡಿಗಳಾಗಿ ವಿಂಗಡಿಸಲಾಗಿರುವ 448 ಲೇಖನಗಳನ್ನು ಒಳಗೊಂಡಿದೆ.

- ಸಂಸತ್ತಿನ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈ ಬರಹದಲ್ಲಿರುವ ಕ್ಯಾಲಿಗ್ರಫೆಡ್ ಪ್ರತಿಗಳನ್ನು ಸಂರಕ್ಷಿಸಲಾಗಿದೆ.
- ಅವುಗಳನ್ನು ಹೀಲಿಯಂ ತುಂಬಿರುವ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.
6. ಭಾರತದ ವಿವಿಧ ಸಂಸ್ಕೃತಿಯ ಪ್ರದರ್ಶನ

- ಗಣರಾಜ್ಯೋತ್ಸವದಿನದಂದು ದೆಹಲಿಯ ರಾಜ್ ಪಥ್ ನಲ್ಲಿ ಜಗತ್ಪ್ರಸಿದ್ಧ ರಾಷ್ಟ್ರೀಯ ಪರೇಡ್ ನಡೆಯುತ್ತದೆ.
- ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ನಮ್ಮ ಭಾರತ ದೇಶದ ಸಾಮರ್ಥ್ಯವನ್ನು ತೋರಿಸುತ್ತಾರೆ.

- ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಲಾಗುವುದು. ಪ್ರಪಂಚಕ್ಕೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಎಲ್ಲಾ ರಾಜ್ಯಗಳ ಟ್ಯಾಬ್ಲಾಯ್ಡ್ಗಳ ಮೂಲಕ ತೋರಿಸಲಾಗುವುದು.
7. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನಾಚರಣೆಯಲ್ಲಿರುವ ವ್ಯತ್ಯಾಸವೇನು?

- ಗಣರಾಜ್ಯೋತ್ಸವವನ್ನು ಪ್ರತಿವರ್ಷವೂ ಜನವರಿ 26 ರಂದು ಪ್ರಜಾಪ್ರಭುತ್ವದ ರಾಷ್ಟ್ರವನ್ನು ಪ್ರಾರಂಭಿಸಿದ ದಿನವೆಂದು ಆಚರಿಸಲಾಗುತ್ತದೆ.
- ಪ್ರತಿವರ್ಷ ಆಗಸ್ಟ್ 15 ರಂದು ಭಾರತ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆದ ದಿನವನ್ನು ಸ್ವಾತಂತ್ರ್ಯ ದಿನವೆಂದು ಆಚರಿಸುತ್ತೇವೆ.
8. ಆಚರಣೆಗಳು

- ದೆಹಲಿಯ ರಾಜ್ಪಥ್ ನಲ್ಲಿ ನಮ್ಮ ಸಶಸ್ತ್ರ ಪಡೆಗಳಾದ ಆರ್ಮಿ, ಏರ್ ಫೋರ್ಸ್ ಮತ್ತು ನೌಕಾಪಡೆ ಪರೇಡ್ ನೋಡಲು ಆಕರ್ಷಕವಾಗಿರುತ್ತದೆ.
- ಇತರ ದೇಶಗಳಿಂದ ಆಹ್ವಾನಿತರಾದ ಅತಿಥಿಗಳಿಗೆ ಗೌರವ ಸಲ್ಲಿಸಲಾಗುವುದು.
- ಭಾರತದ ಅಧ್ಯಕ್ಷರು ಸರ್ಕಾರ ಆಯೋಜಿಸಿದ ಗಣರಾಜ್ಯೋತ್ಸವಕ್ಕೆ ವಂದಿಸುವರು.
9. ಗಣರಾಜ್ಯೋತ್ಸವದಂದು ನೀಡಲಾಗುವ ಪ್ರಶಸ್ತಿಗಳು

- ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಲಾಗುವುದು.

- ಮೊದಲನೆಯ ಅತ್ಯುನ್ನತ ಕ್ರಮದಲ್ಲಿ ನಾಗರಿಕರಿಗೆ ಭಾರತ ರತ್ನವನ್ನು ಅಸಾಧಾರಣ ಸೇವೆ ಅಥವಾ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ

- ಎರಡನೆಯ ಅತ್ಯುನ್ನತ ಕ್ರಮದಲ್ಲಿ ಪದ್ಮ ವಿಭೂಷಣವನ್ನು ಅಸಾಧಾರಣ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
- ಮೂರನೇ ಉನ್ನತ ಕ್ರಮಾಂಕದ ಪದ್ಮಭೂಷಣವನ್ನು ವಿಶೇಷ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
- ನಾಲ್ಕನೇ ಕ್ರಮಾಂಕದ ಪದ್ಮಶ್ರೀ ಪ್ರಶಸ್ತಿ ಪ್ರಜೆಗಳಿಗೆ ವಿಶೇಷ ಸೇವೆಗಾಗಿ ನೀಡಲಾಗುತ್ತದೆ.
10. ಗಣರಾಜ್ಯೋತ್ಸವವನ್ನು ಮಕ್ಕಳೊಂದಿಗೆ ಆಚರಿಸಲು ಉಪಯುಕ್ತ ಸಲಹೆಗಳು :

- ಮಕ್ಕಳನ್ನು ಬೆಳಗ್ಗೆ ಬೇಗ ಎಚ್ಚರಗೊಳಿಸಿ ಮಕ್ಕಳ ಜೊತೆ ದೂರದರ್ಶನದಲ್ಲಿ ಪ್ರಸಾರವಾಗುವ ಲೈವ್ ಗಣರಾಜ್ಯೋತ್ಸವ ಪೆರೇಡ್ ನ ವೀಕ್ಷಿಸಬಹುದು.
- ಶಾಲೆಗೆ ರಜಾ ಘೋಷಿಸಿದ್ದರೆ, ಧ್ವಜಾರೋಹಣ ನಡೆಯುತ್ತಿರುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು.

- ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಹೇಳಬಹುದು.
- ಸ್ವಾತಂತ್ರ್ಯ ಹೋರಾಟಗಾರರಂತೆ ವಸ್ತ್ರಗಳನ್ನು ಧರಿಸಿ ಅವರ ಬಗ್ಗೆ ತಿಳಿಸಿ ಹೇಳಬಹುದು.
- ಪುಟ್ಟ ವಯಸ್ಸಿನಲ್ಲಿ ದೇಶಭಕ್ತಿಯ ಅರಿವು ಮೂಡಿಸಲು ಹುತಾತ್ಮರಿಗೆ ವಂದನೆ ಸಲ್ಲಿಸಬಹುದು.
Monday, January 13, 2020
1. ಆಮ್ಲಜನಕ - O₂
2. ಸಾರಜನಕ - N₂
3. ಹೈಡ್ರೋಜನ್ - H₂
4. ಕಾರ್ಬನ್ ಡೈಆಕ್ಸೈಡ್ - CO₂
5. ಕಾರ್ಬನ್ ಮಾನಾಕ್ಸೈಡ್ - ಸಿಒ
6. ಸಲ್ಫರ್ ಡೈಆಕ್ಸೈಡ್ - SO₂
7. ಸಾರಜನಕ ಡೈಆಕ್ಸೈಡ್ - NO₂
8. ಸಾರಜನಕ ಮಾನಾಕ್ಸೈಡ್ (ನೈಟ್ರಿಕ್ ಆಕ್ಸೈಡ್) - NO
9. ಡೈನೈಟ್ರೋಜನ್ ಆಕ್ಸೈಡ್ (ನೈಟ್ರಸ್ ಆಕ್ಸೈಡ್) - N₂O
10. ಕ್ಲೋರಿನ್ - Cl₂
11. ಹೈಡ್ರೋಜನ್ ಕ್ಲೋರೈಡ್ - ಎಚ್ಸಿಎಲ್
12. ಅಮೋನಿಯಾ - NH₃
ಆಮ್ಲ
13. ಹೈಡ್ರೋಕ್ಲೋರಿಕ್ ಆಮ್ಲ - ಎಚ್ಸಿಎಲ್
14. ಸಲ್ಫ್ಯೂರಿಕ್ ಆಮ್ಲ - H₂SO₄
15. ನೈಟ್ರಿಕ್ ಆಮ್ಲ - HNO₃
16. ಫಾಸ್ಪರಿಕ್ ಆಮ್ಲ - H₃PO₄
17. ಕಾರ್ಬೊನಿಕ್ ಆಮ್ಲ - H₂CO₃
ಕ್ಷಾರ
18. ಸೋಡಿಯಂ ಹೈಡ್ರಾಕ್ಸೈಡ್ - NaOH
19. ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ - ಕೆಒಹೆಚ್
20. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - Ca (OH)
ಉಪ್ಪು
21. ಸೋಡಿಯಂ ಕ್ಲೋರೈಡ್ - NaCl
22. ಕಾರ್ಬೊನೇಟ್ ಸೋಡಿಯಂ - Na₂CO₃
23. ಕ್ಯಾಲ್ಸಿಯಂ ಕಾರ್ಬೊನೇಟ್ - CaCO₃
24. ಕ್ಯಾಲ್ಸಿಯಂ ಸಲ್ಫೇಟ್ - CaSO₄
25. ಅಮೋನಿಯಂ ಸಲ್ಫೇಟ್ - (NH₄)₂SO₄
26. ನೈಟ್ರೇಟ್ ಪೊಟ್ಯಾಸಿಯಮ್ - KNO₃
@studykpsc
27. ಚಾಕ್ - ಕ್ಯಾಲ್ಸಿಯಂ ಕಾರ್ಬೊನೇಟ್ - CaCO₃
28. ದ್ರಾಕ್ಷಿಹಣ್ಣು - ಗ್ಲೂಕೋಸ್ - C6H₁₂O6
29. ಆಲ್ಕೋಹಾಲ್ - C₂H5 OH
30. ಕಾಸ್ಟಿಕ್ ಪೊಟ್ಯಾಶ್ - ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ - KoH
31. ಸೋಡಾ ತಿನ್ನುವುದು - ಸೋಡಿಯಂ ಬೈಕಾರ್ಬನೇಟ್ - NaHCO₃
32. ಸುಣ್ಣ - ಕ್ಯಾಲ್ಸಿಯಂ ಆಕ್ಸೈಡ್ - CaO
33. ಜಿಪ್ಸಮ್ - ಕ್ಯಾಲ್ಸಿಯಂ ಸಲ್ಫೇಟ್ - CaSO₄.2H₂O
34. ಟಿ.ಎನ್.ಟಿ. - ಟ್ರೈ ನೈಟ್ರೋ ಟ್ಯಾಲಿನ್ - C6H₂CH₃ (NO₂)
35. ಸೋಡಿಯಂ ಕಾರ್ಬೊನೇಟ್ Na₂CO₃
36. ನೀಲಿ ಥಾಥ್ - ತಾಮ್ರದ ಸಲ್ಫೇಟ್ - CuSO₄
37. ಮೋಲಾರ್ - ಅಮೋನಿಯಂ ಕ್ಲೋರೈಡ್ - NH₄Cl
38. ಆಲಮ್ - ಪೊಟ್ಯಾಸಿಯಮ್ ಅಲ್ಯೂಮಿನಿಯಂ ಸಲ್ಫೇಟ್ - K₂SO₄Al₂ (SO₄) ₃.24H₂O
39. ತಣಿಸಿದ ಸುಣ್ಣ - ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - Ca (OH)
40. ಪಿಷ್ಟ - ಪಿಷ್ಟ - C6 H 10 O 5
41. ನಗುವ ಅನಿಲ - ನೈಟ್ರಸ್ ಆಕ್ಸೈಡ್ - N₂O
42. ಪೊಟ್ಯಾಸಿಯಮ್ ಪರ್ಮಾಂಗನೇಟ್ - KMnO₄
43. ಕೆಂಪು ವರ್ಮಿಲಿಯನ್ - ಸೀಸದ ಪ್ಯಾರಾಕ್ಸೈಡ್ - Pb₃O₄
44. ಡ್ರೈ ಐಸ್ - ಘನ ಕಾರ್ಬನ್-ಡಯ್-ಆಕ್ಸೈಡ್ - CO₂
45. ಪೊಟ್ಯಾಸಿಯಮ್ ನೈಟ್ರೇಟ್ - KNO₃
46. ವಿನೆಗರ್ - ಅಸಿಟಿಕ್ ಆಮ್ಲದ ದ್ರಾವಣವನ್ನು ದುರ್ಬಲಗೊಳಿಸಿ - CH₃COOH
47. ಸುಹಾಗಾ - ಬೊರಾಕ್ಸ್ - Na₂B₄O7.10H₂O
48. ಸ್ಪಿರಿಟ್ - ಮೀಥೈಲ್ ಆಲ್ಕೋಹಾಲ್ - CH₃OH
49. ಸ್ಲೇಟ್ - ಸಿಲಿಕಾ ಅಲ್ಯೂಮಿನಿಯಂ ಆಕ್ಸೈಡ್ - Al₂O₃2SiO₂.2H₂O
50. ಗ್ರೀನ್ ಕೇಸ್ - ಫೆರಿಕ್ ಸಲ್ಫೇಟ್ - Fe₂ (SO₄)
Monday, December 30, 2019
ಕರ್ನಾಟಕದಲ್ಲಿ ಮಹಾನ್ ಪಂಡಿತರಿಂದ ಸಾಮಾನ್ಯ ಜನಗಳವರೆಗೆ ಗೊತ್ತಿರುವ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಹೆಸರು ಕುವೆಂಪು. ಒಂದು ರೀತಿಯಲ್ಲಿ ಎಲ್ಲರೂ ಒಪ್ಪುವ ಹಿರಿಮೆಯ ಹೆಸರು ಕುವೆಂಪು.
ಇಪ್ಪತ್ತನೆಯ ಶತಮಾನದಿಂದ ಈಚೆಗಿನ ಕನ್ನಡ ಸಾಹಿತ್ಯ ಚರಿತ್ರೆ ಕುವೆಂಪು ಅವರ ಸಾಹಿತ್ಯಕ ಬೆಳವಣಿಗೆ, ಸಾಧನೆ, ಸಿದ್ಧಿಗಳಿಂದ, ಅವರು ಇತರ ಕವಿಗಳ ಮೇಲೆ ಬೀರಿದ ಪ್ರಭಾವದಿಂದ ಕಂಗೊಳಿಸುತ್ತಿದೆ. ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಚನ, ಕವನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ – ಈ ಒಂದೊಂದು ಪ್ರಕಾರದಲ್ಲೂ ಗಣನೀಯವಾದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ. ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಮೊದಲಿಗರಲ್ಲಿ ಅವರೂ ಒಬ್ಬರು.
ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಹರಿಯುತ್ತಿರುವ ತುಂಗಾ ನದಿಯನ್ನು ದಾಟಿ ಒಂಬತ್ತು ಮೈಲು ಹೋದರೆ ಕಾಡಿನ ನಡುವೆ ಬೆಟ್ಟಕ್ಕೆ ಅಂಟಿಕೊಂಡಂತೆ ಇರುವ ಮನೆ ಕುಪ್ಪಳ್ಳಿ. ಅದೇ ಅವರ ಊರು. ಅವರು ಹುಟ್ಟಿದ್ದು ಮಾತ್ರ ಕೊಪ್ಪಕ್ಕೆ ಸಮೀಪವಾದ ಹಿರೇಕೊಡಿಗೆಯಲ್ಲಿದ್ದ ತಮ್ಮ ತಾಯಿಯ ತವರುಮನೆಯಲ್ಲಿ. 1904 ಡಿಸೆಂಬರ್ 29ನೇ ತಾರೀಖು. ಕುವೆಂಪು ಬೆಳೆದದ್ದು ಕುಪ್ಪಳ್ಳಿಯಲ್ಲಿ. ಮನೆಯ ಸುತ್ತಲಿನ ಸುಂದರ ಪರಿಸರ, ಪ್ರಕೃತಿ ಸಂಪತ್ತು, ಹಿರಿಯರ ಜೊತೆ ಪಾಲ್ಗೊಳ್ಳುತ್ತಿದ್ದ ಶಿಕಾರಿಯಂತಹ ಸಾಹಸ ಯಾತ್ರೆಗಳು, ಈ ಎಲ್ಲವೂ ಕವಿ ಶಿಶುವಿನ, ಕವಿ ಬಾಲಕನ, ಕವಿ ತರುಣನ ಚೇತನದ ಆಳಕ್ಕೆ ನದಿಯಾಗಿ, ಜಲಪಾತವಾಗಿ ಧುಮ್ಮಿಕ್ಕಿ ಮಡುಗಟ್ಟಿನಿಂತುವು.
ಕವಿ ಬಾಲಕನಿಗೆ ಚಿಕ್ಕಂದಿನಿಂದಲೇ ಸಾಹಿತ್ಯ ಸಂಸ್ಕಾರವೂ ದೊರಕಿತು. ಮನೆಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರೂ ಸಾಹಿತ್ಯಾಸಕ್ತರು. ಜೈಮಿನಿ ಭಾರತ, ತೊರವೆ ರಾಮಾಯಣಗಳ ವಾಚನ ಮನೆಯಲ್ಲಿ ನಡೆಯುತ್ತಿತ್ತು. ಬಾಲಕ ಅದನ್ನು ಆಸಕ್ತಿಯಿಂದ ಕೇಳುತ್ತಿದ್ದ. ಹುಡುಗನಿಗೆ ಜೊತೆಯ ಇತರ ಬಾಲಕರೊಡನೆ ಮನೆಯೇ ಶಾಲೆಯೂ ಆಯಿತು. ಅನೇಕ ‘ಐಗಳು’ ಬಂದು ಹೋಗಿ ಮಾಡಿ ವಿದ್ಯಾಭ್ಯಾಸ ಕುಂಟುತ್ತಾ ನಡೆಯಿತು. ಕಡೆಗೆ ರೋಮನ್ ಕ್ಯಾಥೊಲಿಕ್ ‘ಐಗಳು’ ಒಬ್ಬರು ಇಂಗ್ಲೀಷ್ ಬಾಷಾ ಸಾಹಿತ್ಯಗಳ ಪರಿಚಯ ನೀಡಿದರು. ಎಂಟನೇ ವಯಸ್ಸಿನಲ್ಲಿ ಅವರನ್ನು ತೀರ್ಥಹಳ್ಳಿಯ ಶಾಲೆಗೆ ಸೇರಿಸಲಾಯಿತು. ಮೊದಲನೆಯ ಮಹಾಯುದ್ದದಲ್ಲಿ ಅವರ ಕುಟುಂಬಕ್ಕೆ ಆದ ನಷ್ಟಗಳಿಂದ ಅವರ ಕುಟುಂಬ ಸಹಾ ತೀರ್ಥಹಳ್ಳಿಗೆ ವಾಸ್ತವ್ಯ ಬದಲಾಯಿಸಿತು. ಚಿಕ್ಕವರಾದ ಪುಟ್ಟಪ್ಪ, ಅವರ ತಾಯಿ ಮತ್ತು ಪುಟ್ಟಪ್ಪನವರಿಗಿಂತಲೂ ಕಿರಿಯರಾದ ಎರಡು ಹೆಣ್ಣು ಮಕ್ಕಳನ್ನು ಅವರ ತಂದೆ ಅಗಲಿದರು.
ಮುಂದೆ ಪುಟ್ಟಪ್ಪನವರ ವಿದ್ಯಾಭ್ಯಾಸ ಮೈಸೂರಿನ ಹಾರ್ಡ್ವಿಕ್ ಹೈಸ್ಕೊಲಿನಲ್ಲಿ ಮುಂದುವರೆಯಿತು. ಷೆಲ್ಲಿ, ವರ್ಡ್ಸ್ ವರ್ತ್, ಕೀಟ್ಸ್ ಮುಂತಾದ ಆಂಗ್ಲ ಕವಿಗಳ ಕವನಗಳನ್ನು ಸ್ವತಂತ್ರವಾಗಿ ಓದುವ ಶಕ್ತಿ ಅವರಿಗೆ ಬಂದಿತ್ತು. ಟಾಲ್ಸ್ ಟಾಯ್ ಕಾದಂಬರಿಗಳು, ಪೌರಾತ್ಯ, ಪಾಶ್ಚಾತ್ಯ ತತ್ವಜ್ಞರ ಬರವಣಿಗೆಗಳು ಅವರ ಭಾವ ಬುದ್ಧಿಗಳಿಗೆ ಪುಷ್ಟಿ ನೀಡಿದವು. ಶ್ರೀರಾಮಕೃಷ್ಣಾಶ್ರಮದ ಮೈಸೂರು ಶಾಖೆಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸಿದ್ದೇಶ್ವರಾನಂದರು ಬಾಲಕನಿಗೆ ತುಂಬ ಪ್ರಿಯರಾಗಿ ಅವನ ಸಕಲ ಯೋಗಕ್ಷೇಮವನ್ನೂ ವಹಿಸಿಕೊಂಡರು. ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀರಾಮಕೃಷ್ಣ ಪರಮಹಂಸರೂ ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರೂ ಪುಟ್ಟಪ್ಪನವರಿಗೆ ಆದರ್ಶವ್ಯಕ್ತಿಗಳಾದರು.
ಇಂಗ್ಲೀಷ್ ಕವಿಗಳ ಸಂಮೋಹನ, ಇಂಗ್ಲೀಷ್ ಭಾಷೆ ಛಂದಸ್ಸುಗಳ ಮೇಲಣ ಪ್ರಭುತ್ವ ಇವು ಬಾಲಕ ಪುಟ್ಟಪ್ಪನಲ್ಲಿ ಹೊಸ ಆಸೆ ಆಕಾಂಕ್ಷೆಗಳನ್ನು ಅರಳಿಸಿದವು. ಹದಿನೆಂಟರ ಹರೆಯದ ಪುಟ್ಟಪ್ಪ 1922ರಲ್ಲಿ ತಮ್ಮ ಇಂಗ್ಲೀಷ್ ಕವನಗಳ ಪುಟ್ಟ ಸಂಕಲನವೊಂದನ್ನು ‘ಬಿಗಿನರ್ಸ್ ಮ್ಯೂಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಆಗಿನ್ನೂ ಅವರು ಹೈಸ್ಕೂಲು ಮೂರನೆಯ ತರಗತಿಯ ವಿದ್ಯಾರ್ಥಿ. ಕವನಗಳನ್ನು ಓದಿದ ಮಿತ್ರರೂ, ಹಿರಿಯರೂ ಕವನಗಳ ಭಾಷೆಗೆ, ಉಪಮೆ ರೂಪಕಗಳಿಗೆ, ವಸ್ತು ವೈವಿಧ್ಯಕ್ಕೆ, ಕಲ್ಪನಾ ಚಾತುರ್ಯಕ್ಕೆ ಮಾರುಹೋದರು. ಆಕಸ್ಮಿಕ ಎಂಬಂತೆ ಮೈಸೂರಿಗೆ ಬಂದಿದ್ದ ಐರಿಷ್ ಕವಿ ಜೇಮ್ಸ್ ಕಸಿನ್ಸ್ ಅವರಿಗೆ ಪುಟ್ಟಪ್ಪನವರು ತಮ್ಮ ಕವನಗಳನ್ನು ತೋರಿಸಿದರು. ಕವನಗಳನ್ನು ಓದಿದ ಜೇಮ್ಸ್ ಕಸಿನ್ಸ್ ಮೆಚ್ಚಿ ಪ್ರೋತ್ಸಾಹಿಸುವುದರ ಬದಲು ‘ರವೀಂದ್ರರು ತಮ್ಮ ತಾಯಿನುಡಿಯಾದ ಬಂಗಾಳಿಯಲ್ಲಿ ಬರೆದಂತೆ, ನೀನು ನಿನ್ನ ತಾಯಿನುಡಿಯಾದ ಕನ್ನಡದಲ್ಲಿ ಬರೆ, ಉತ್ತಮ ಕವಿಯಾಗುತ್ತೀಯ’ ಎಂದರು. ಆ ಕ್ಷಣದಲ್ಲಿ ಪುಟ್ಟಪ್ಪನವರಿಗೆ ಅದನ್ನು ಒಪ್ಪುವ ಮನಸ್ಸು ಮೂಡಲಿಲ್ಲವಾದರೂ ಮುಂದೆ ತಮ್ಮ ‘ಎಪ್ರಿಲ್’ ಎಂಬ ಆಂಗ್ಲಕವನವನ್ನು ‘ಚೈತ್ರ-ವೈಶಾಖ’ ಎಂದು ಅನುವಾದಿಸಿ ಪ್ರಕಟಿಸಿದರು. ಕವಿಯ ಜೀವನವಾಹಿನಿ ಇಂಗ್ಲೀಷಿನಿಂದ ಕನ್ನಡದ ಕಡೆಗೆ ತಿರುಗಿ ಹರಿಯತೊಡಗಿತು.
ಕೆ. ವಿ. ಪುಟ್ಟಪ್ಪನವರ ವಿದ್ಯಾಭ್ಯಾಸ ಮುಂದುವರೆಯಿತು. ಬಿ.ಎ. ಓದುವ ಸಮಯದಲ್ಲಿ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೂ ದಾಖಲಾಗಿ ನಂತರದಲ್ಲಿ ನಾ. ಕಸ್ತೂರಿ ಮತ್ತು ಸ್ವಾಮೀ ಸಿದ್ದೇಶ್ವರಾನಂದರ ಒತ್ತಾಸೆಯಲ್ಲಿ ರಾಮಕೃಷ್ಣಾಶ್ರಮಕ್ಕೆ ವಾಸ್ತವ್ಯ ಬದಲಾಯಿಸಿದರು. ಅವರ ಓದು ಮುಗಿದು ಅಧ್ಯಾಪಕ ವೃತ್ತಿಯಲ್ಲಿದ್ದಾಗಿನ ದಿನದಲ್ಲಿ ಕೂಡ ಶ್ರೀರಾಮಕೃಷ್ಣಾಶ್ರಮವೇ ಅವರ ಮನೆಯಾಯಿತು.
ಪುಟ್ಟಪ್ಪನವರ ಕನ್ನಡ ಕವನಗಳು ಜನಪ್ರಿಯವಾದವು. ವಿದ್ಯಾರ್ಥಿಗಳು ಮಾತ್ರವಲ್ಲದೆ ಅಧ್ಯಾಪಕ ವರ್ಗದಲ್ಲಿದ್ದ ಪ್ರೊ. ಟಿ. ಎಸ್. ವೆಂಕಣ್ಣಯ್ಯ, ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಪ್ರೊ. ಬಿ. ಎಂ. ಶ್ರೀಕಂಠಯ್ಯ ಅವರುಗಳು ಕವಿಯನ್ನು ಮೆಚ್ಚಿ ಪ್ರಶಂಸಿಸಿದರು. 1942ರಲ್ಲಿ ಪುಟ್ಟಪ್ಪನವರು ಮಹಾತ್ಮಾ ಗಾಂಧೀಜಿಯವರ ದರ್ಶನ ಪಡೆದರು. ಆದರೆ ರಾಜಕೀಯ ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಅಧ್ಯಾತ್ಮ-ಕಾವ್ಯ ಇವೇ ಅವರ ಎರಡು ಕಣ್ಣುಗಳಾದವು.
ಎಂ. ಎ. ತರಗತಿಯಲ್ಲಿ ಪುಟ್ಟಪ್ಪ ತತ್ವಶಾಸ್ತ್ರ ಆರಿಸಿಕೊಂಡಿದ್ದರು. ಆದರೆ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಯವರ ಒಲುಮೆಯ ಒತ್ತಾಯದಿಂದ ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಕನ್ನಡ ಎಂ.ಎ.ಗೆ ಸೇರಿದರು. ಆ ಕ್ಷಣವನ್ನು ಕುವೆಂಪು “ಅಮೃತ ಕ್ಷಣ” ಎಂದು ಕರೆದಿದ್ದಾರೆ. ವಿದ್ಯಾರ್ಥಿಯಾಗಿಯೇ ಪುಟ್ಟಪ್ಪನವರು ಅನೇಕ ಕವನಗಳನ್ನು ರಚಿಸುತ್ತಾ ಹೋದರು. ಎ. ಆರ್. ಕೃಷ್ಣಶಾಸ್ತ್ರಿಗಳ ಒತ್ತಾಯದಿಂದ ಅವರು ಏರ್ಪಡಿಸಿದ್ದ ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರನ್ನು ನೋಡುವುದಕ್ಕೆ ಜನ ಸೇರುತ್ತಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ಏಕೆಂದರೆ ಕೃಷ್ಣಶಾಸ್ತ್ರಿಗಳು ವರ್ಣಿಸಿರುವಂತೆ ವಿದ್ಯಾರ್ಥಿಯಾಗಿದ್ದಾಗ ಅವರು “ಬೇಲೂರು ಗುಡಿಯ ಗೋಡೆಯ ಮೇಲೆ ಕೆತ್ತಿದ ದೇವತಾ ವಿಗ್ರಹದಂತೆ” ಇದ್ದರು.
ಎಂ. ಎ. ತರಗತಿಯಲ್ಲಿ ಸೇರಿದ ಮೊದಲಲ್ಲಿ ‘ಜಲಗಾರ’, ಅನಂತರ ‘ಯಮನ ಸೋಲು’ ನಾಟಕಗಳನ್ನು ಪುಟ್ಟಪ್ಪನವರು ರಚಿಸಿದರು. ಅವೆರಡೂ ಭಾರೀ ಯಶಸ್ಸನ್ನು ಗಳಿಸಿದ್ದವು. ಆ ವೇಳೆಗಾಗಲೇ ಅವರು ‘ಅಮಲನ ಕಥೆ’ ಎಂಬ ತಮ್ಮ ಪ್ರಥಮ ಕನ್ನಡ ಪುಸ್ತಕದಿಂದಲೂ, ‘ಬೊಮ್ಮನಹಳ್ಳಿ ಕಿಂದರಜೋಗಿ’ ನೀಳ್ಗವನದಿಂದಲೂ ಕನ್ನಡ ನಾಡಿನ ಕಾವ್ಯ-ಪ್ರಿಯರ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡಿದ್ದರು. 1929 ಅವರ ಮಹತ್ವದ ವರ್ಷ. ಅವರು ಎಂ.ಎ ಪದವಿ ಪಡೆದದ್ದು, ಕನ್ನಡ ಅಧ್ಯಾಪಕರಾಗಿ ನೇಮಕವಾದದ್ದು, ಮತ್ತು ಬಂಗಾಳದ ಬೇಲೂರು ಮಠದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರೂ ಸ್ವಯಂ ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರೂ ಆದ ಶೀ ಸ್ವಾಮಿ ಶಿವಾನಂದರಿಂದ ಮಂತ್ರದೀಕ್ಷೆ ಸ್ವೀಕಾರ ಮಾಡಿದ್ದು ಇವು ಮೂರೂ ಘಟನೆಗಳೂ ನಡೆದವು.
1930ರಲ್ಲಿ ಕುವೆಂಪುರವರ ಕವನ ಸಂಕಲನ ‘ಕೊಳಲು’ ಪ್ರಕಟವಾಯಿತು. ಮುನ್ನುಡಿ ಬರೆದ ಆಚಾರ್ಯ ಬಿ.ಎಂ.ಶ್ರೀ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಳಲಿನ ಅತ್ಯುತ್ಕೃಷ್ಟವಾದ ಕವನಗಳಲ್ಲಿ ಒಂದಾದ ‘ಸುಗ್ಗಿ ಬರುತಿದೆ’ ಎಂಬುದರ ಮೊದಲ ಚರಣ ಹೀಗಿದೆ:
ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗ ಸೊಗವ ತರುತಿದೆ
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ,
ಸುಗ್ಗಿ ಮೂಡುತಿರುವುದು
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು
ಡಿ. ವಿ. ಗುಂಡಪ್ಪನವರು ಈ ಪಂಕ್ತಿಗಳನ್ನು ಉದ್ಧರಿಸಿ ಹೇಳಿ “ಇದನ್ನು ಬರೆಯುವ ಕವಿಗಳಿದ್ದಾರೆ. ಇನ್ನು ಕನ್ನಡಕ್ಕೆ ಭಯವಿಲ್ಲ” ಎಂದು ಉದ್ಗರಿಸಿದರಂತೆ! 1936ರಲ್ಲಿ ಅವರ ಖಂಡಕಾವ್ಯ ‘ಚಿತ್ರಾಂಗದಾ’ ಪ್ರಕಟವಾಯಿತು. ಇದು ಕನ್ನಡದ ಮೊದಲ ಖಂಡಕಾವ್ಯ. 1937ರಲ್ಲಿ ಅವರ ಮದುವೆಯಾಯಿತು. ಸಂಸಾರ ಅವರಿಗೆ ಪೂಜೆಯಾಯಿತು.
1933ರಿಂದ 36ರವರೆಗೆ ಅವರು ಕಾದಂಬರಿಯ ರಚನೆಯಲ್ಲಿ ತೊಡಗಿದರು. 1938ರಲ್ಲಿ ‘ಕಾನೂರು ಹೆಗ್ಗಡಿತಿ’ ಪ್ರಕಟವಾಯಿತು. ಕನ್ನಡದಲ್ಲಿ ಆ ಪ್ರಮಾಣದಲ್ಲಿ ರಚಿತವಾದ ಪ್ರಪ್ರಥಮ ಸಾಮಾಜಿಕ ಕಾದಂಬರಿ ಅದೇ. ಅದರ ವೈಶಿಷ್ಟ್ಯಗಳು ಅನೇಕ. ಅಂದಿನ ದಿನ ಮಲೆನಾಡಿನ ಕಾಡು ಬೆಟ್ಟಗಳ ಚಿತ್ರಣ; ವಿವಿಧ ರೀತಿಯ ಭೇಟೆಗಳ ವಾಸ್ತವಿಕ ವರ್ಣನೆ; ಕನ್ನಡ ನಾಡಿನ ಇತರ ಭಾಗಗಳಿಗಿಂತ ತೀರ ಭಿನ್ನವಾಗಿದ್ದ ಪ್ರದೇಶವೊಂದರ ಆತ್ಮೀಯವಾದ ಪರಿಚಯ; ಆಳವಾದ ಜೀವನಾನುಭವದ ರಮ್ಯ ನಿರೂಪಣೆ; ರಾಗದ್ವೇಷಗಳ ವರ್ಣರಂಜಿತ ವ್ಯಾಖ್ಯಾನ; ಸಮಯೋಚಿತ ಹಾಸ್ಯ; ಮಲೆನಾಡಿಗೇ ವಿಶಿಷ್ಟವಾದ ಕನ್ನಡ ಭಾಷೆಯ ಸೊಗಸು; ಸಾಮಾಜಿಕ ಪ್ರಜ್ಞೆ; ಮಣ್ಣನ್ನು ನಿಜವಾಗಿ ಬಲ್ಲ ವಿರಳ ಲೇಖಕರಲ್ಲಿ ಒಬ್ಬರಾದ ಈ ಕವಿ ಸಹಜವಾಗಿ, ಅಪ್ರಯತ್ನ ಪೂರ್ವಕವಾಗಿ, ವ್ಯಾಪಕವಾಗಿ ಹೊಮ್ಮಿಸಿರುವ ಮಣ್ಣಿನ ವಾಸನೆ; ಇನ್ನೂ ಅನೇಕ.
ಕುವೆಂಪು ಅವರ ಮತ್ತೊಂದು ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕಾನೂರು ಹೆಗ್ಗಡತಿ ಪ್ರಕಟವಾದ ಮೂವತ್ತು ವರ್ಷಗಳ ಬಳಿಕ ಪ್ರಕಟವಾಯಿತು. ಇದರ ವಸ್ತು ಶುದ್ಧ ಕಾಮ. ಇಲ್ಲಿ ಕಾಮಕ್ಕೆ ಉದಾತ್ತತೆಯ ದರ್ಬಾರು ಪೋಷಾಕನ್ನಾಗಲಿ, ನಮ್ಮ ಇತರ ಅನೇಕ ಲೇಖಕರು ಆರೋಪಿಸುವ ಬಡತನದ ಚಿಂದಿಯನ್ನಾಗಲಿ ಉಡಿಸಿಲ್ಲ. ಕಾಮ ಮತ್ತು ಅದರ ಸಹಚರಿಯಾದ ಜೀವ ಕಾಮಗಳು ಇಲ್ಲಿ ಸಹಜ ಸ್ಥಿತಿಯಲ್ಲಿ, ಸ್ವಚ್ಚಂದವಾಗಿ ವಿಹರಿಸಿವೆ. ಕನ್ನಡದ ಅತ್ಯುತ್ತಮ ಕಾದಂಬರಿಗಳು ‘ಕಾನೂರು ಹೆಗ್ಗಡತಿ ಮತ್ತು ‘ಮಲೆಗಳಲ್ಲಿ ಮದುಮಗಳು’.
1945ರಲ್ಲಿ ಕುವೆಂಪು ಕನ್ನಡ ಪ್ರಾಧ್ಯಾಪಕರೂ ಇಲಾಖೆಯ ಮುಖ್ಯಸ್ಥರೂ ಆದರು. 1949ರಲ್ಲಿ ಅವರ ಮೇರುಕೃತಿ ‘ಶ್ರೀರಾಮಾಯಣ ದರ್ಶನಂ’ ಪ್ರಕಟವಾಯಿತು. 25,000 ಪಂಕ್ತಿಗಳ ಮಹಾಕಾವ್ಯವಿದು. ಕುವೆಂಪು ವಾಲ್ಮೀಕಿ ರಾಮಾಯಣವನ್ನು ಉತ್ತಮ ಪಡಿಸುತ್ತೇನೆ ಎಂದು ಈ ಕಾರ್ಯಕ್ಕೆ ಹೋಗಿಲ್ಲ. ಈ ಯುಗದ ಹೊಸ ಕಾಣ್ಕೆಯ ಹಿನ್ನಲೆಯಲ್ಲಿ ಹೊಸ ರೀತಿಯಿಂದ ಹೇಳುತ್ತೇನೆ ಎಂದರು. ಅವರ ಕಣ್ಣಿನಲ್ಲಿ ರಾಮಾಯಣ ಬರಿಯ ಕಥೆಯಲ್ಲ. ಇತಿಹಾಸವೂ ಅಲ್ಲ. ಅಲೌಕಿಕ ಸತ್ಯಗಳನ್ನು ಪ್ರತಿಮಿಸುವ ಸತ್ಯಸ್ಯ ಸತ್ಯ ಘಟನೆ. ಶ್ರೀರಾಮ ಆ ಲೋಕದಿಂದ ಅವತರಿಸಿ ಬಂದು ಈ ಲೋಕ ಸಂಭವೆಯಾದ ಸೀತೆಯನ್ನು ವರಿಸುತ್ತಾನೆ. ಆ ನೆಪದಿಂದ ಮೃತ್ ಶಕ್ತಿಯನ್ನು – ಎಂದರೆ ಬರೀ ಇಂದ್ರಿಯ ಜಗತ್ತೇ ಸತ್ಯ ಎಂಬುದನ್ನು ಮರ್ದಿಸಿ ಚೈತನ್ಯ ಶಕ್ತಿಯನ್ನು ಎಂದರೆ ಆತ್ಮದ ಶಕ್ತಿಯನ್ನು ಬೆಳಗುತ್ತಾನೆ.
ಕುವೆಂಪು ಷೇಕ್ಸ್ ಪಿಯರನ ನಾಟಕಗಳ ರೂಪಾಂತರವಾದ ‘ಬಿರುಗಾಳಿ’(ದಿ ಟೆಂಪೆಸ್ಟ್) ಮತ್ತು ‘ರಕ್ತಾಕ್ಷಿ’(ಹ್ಯಾಮ್ಲೆಟ್)ಗಳನ್ನು ನೀಡಿದ್ದಾರೆ. ‘ವಾಲ್ಮೀಕಿಯ ಭಾಗ್ಯ’, ‘ನನ್ನ ಗೋಪಾಲ’(ಮಕ್ಕಳಿಗಾಗಿ ಬರೆದದ್ದು), ‘ಸ್ಮಶಾನ ಕುರುಕ್ಷೇತ್ರ’ ನಾಟಕಗಳನ್ನೂ ಬರೆದರು. ‘ಸ್ಮಶಾನ ಕುರುಕ್ಷೇತ್ರ’ ನಾಟಕ ರಚಿಸಿದಾಗ ಅವರಿಗೆ ಕೇವಲ ಇಪ್ಪತ್ತಾರು ವರ್ಷ. ಆ ತಾರುಣ್ಯದಲ್ಲೇ ಜೀವನವನ್ನು ಸಮಗ್ರವಾಗಿ ನೋಡಿ, ಬದುಕಿಗೆ ಏನೇನೂ ಅರ್ಥವಿಲ್ಲ ಎಂಬುದನ್ನೂ, ಅಥವ ಬದುಕಿನ ಅರ್ಥ ಇಷ್ಟೇ ಎಂಬುದನ್ನು ನಿರ್ಣಯಿಸಿ ಕಾವ್ಯವಾಣಿಯಲ್ಲಿ ಮಹಾದೇವ ಮಹಾರುದ್ರನ ಬಾಯಲ್ಲಿ ಹೀಗೆ ಹಾಡಿಸಿರುವುದು ಆಶ್ಚರ್ಯದ ಸಂಗತಿಗಳಲ್ಲಿ ಒಂದಾಗಿದೆ:
ಎಲ್ಲ ದಾನಗಳು, ಎಲ್ಲ ಧರ್ಮಗಳು
ಕಡೆಗಿಲ್ಲಿಗೇ – ಎನ್ನ ಬಳಿಗೆ!
ಎಲ್ಲ ಪಾಪಗಳು, ಎಲ್ಲ ಎಲ್ಲ ಪುಣ್ಯಗಳು
ಕಡೆಗೊಂದು ನಗೆಗೇ – ಭಸ್ಮಮೆನಗೆ!
ಅವರ ನಾಟಕಗಳ ಪಂಕ್ತಿಯಲ್ಲಿ ಕಲೆಯ ದೃಷ್ಟಿಯಿಂದಲೂ, ದರ್ಶನ ದೃಷ್ಟಿಯಿಂದಲೂ ಅತ್ಯಂತ ಉತ್ತಮವಾದದ್ದು ‘ಬೆರಳ್ ಗೆ-ಕೊರಳ್’. ಅಲ್ಲಿನ ಮೂರು ದೃಶ್ಯಗಳನ್ನು ಕವಿ ‘ಗುರು’, ‘ಕರ್ಮ’ ಮತ್ತು ‘ಯಜ್ಞ’ ಎಂದು ಕರೆದಿದ್ದಾರೆ. ಏಕಲವ್ಯನ ಬೆರಳನ್ನು ದಕ್ಷಿಣೆಯಾಗಿ ಕೇಳಿ, ಅವನ ಮಾತೃ ಶಾಪಕ್ಕೆ ತುತ್ತಾಗಿ ದ್ರೋಣರು ತಮ್ಮ ಕೊರಳನ್ನೇ ಬಲಿಯಾಗಿ ತೆತ್ತರು ಎಂಬುದು ಕುವೆಂಪು ಅವರ ಕಾಣ್ಕೆ.
ಕುವೆಂಪು ಸಾವಿರಾರು ಕವನಗಳನ್ನು ರಚಿಸಿದ್ದಾರೆ. ಕಾವ್ಯ ಮೀಮಾಂಸೆಯ ಕ್ಷೇತ್ರಕ್ಕಂತೂ ಅವರು ನೀಡಿರುವ ಕೊಡುಗೆ ಅಪೂರ್ವವಾದುದು ಎಂದು ಎಲ್ಲ ಪಂಡಿತರ ಅಭಿಪ್ರಾಯ. ಅವರದು ‘ದರ್ಶನ ವಿಮರ್ಶೆ’.
ಕುವೆಂಪು ಅವರದು ಪ್ರಧಾನತಃ ವಿಚಾರಶೀಲ ವ್ಯಕ್ತಿತ್ವ, ಕ್ರಾಂತಿಕಾರಕ ಮನೋಭಾವ. ಸಮಾಜದಲ್ಲಿನ ಎಲ್ಲ ವಿಧವಾದ ಅಸಮಾನತೆಗಳೂ ಹೋಗಬೇಕು ಎಂದು ಉಗ್ರವಾಗಿ ಗದ್ಯದಲ್ಲಿ, ಹೃದಯಂಗಮವಾಗಿ ಪದ್ಯದಲ್ಲಿ ವಾದಿಸಿದ್ದಾರೆ. ಅವರು ಮೌಢ್ಯಕ್ಕೆ ಪರಮ ಶತ್ರು. ಜಾತಿಪದ್ಧತಿ ನಿರ್ಮೂಲಗೊಳ್ಳದೆ ಈ ದೇಶದ ಜನರ ಉದ್ಧಾರ ಅಸಾಧ್ಯ ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಅವರು ಸದಾ ಜಪಿಸುತ್ತಿದುದು “ವಿಶ್ವಮಾನವ ಮಂತ್ರ”. “ಜಾತಿ, ದೇಶ, ಭಾಷೆ ಇವುಗಳ ಕಿರು ಪ್ರಪಂಚದಿಂದ ಮನುಷ್ಯ ಒಂದಲ್ಲ ಒಂದು ದಿನ ಹೊರಬಂದು ವಿಶಾಲವಾದ ವಿಶ್ವಮಾನವನಾಗುತ್ತಾನೆ” ಎಂಬ ವಿಶ್ವಾಸ ಅವರಲ್ಲಿ ಅಚಲವಾಗಿತ್ತು. “ಯಾವ ವ್ಯಕ್ತಿಯೂ ಯಾವುದೇ ಜಾತಿಯ ಶಿಶುವಲ್ಲ; ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲೂ ಅವನದೇ ಆದ ಧರ್ಮ ಇದೆ. ಈ ಜಗತ್ತಿನಲ್ಲಿ ಎಷ್ಟು ಜನ ವ್ಯಕ್ತಿಗಳಿದ್ದಾರೆಯೋ ಅಷ್ಟು ಧರ್ಮಗಳಿರಲಿ” ಎಂಬ ಸ್ವಾಮಿ ವಿವೇಕಾನಂದರ ವಾಣಿ ಮಾನವತೆಯ ಜೀವನ ಧರ್ಮವಾಗಲಿ ಎಂಬ ಹಾರೈಕೆ ಅವರದು.
ತನ್ನ ಮೆಚ್ಚಿನ ಕವಿಗೆ ಕನ್ನಡದ ಜನತೆ, ಸರ್ಕಾರ, ವಿಶ್ವವಿದ್ಯಾನಿಲಯಗಳು, ಕೇಂದ್ರ ಸರ್ಕಾರ, ರಾಜ್ಯ – ಕೇಂದ್ರ ಸಾಹಿತ್ಯ ಅಕಾಡೆಮಿಗಳು – ಎಲ್ಲ ಬಗೆಯ ಅತ್ಯುನ್ನತ ಗೌರವಗಳನ್ನೂ ನೀಡಿವೆ. 1956ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. 1968ರಲ್ಲಿ ‘ಜ್ಞಾನಪೀಠ’ ಪ್ರಶಸ್ತಿ ‘ಶ್ರೀರಾಮಾಯಣದರ್ಶನಂ’ ಕೃತಿಗೆ ದೊರಕಿತು. 1988ರಲ್ಲಿ ಪಂಪ ಪ್ರಶಸ್ತಿ ಕೂಡ ಆ ಕೃತಿಗೆ ನೀಡಲಾಯಿತು. ರಾಷ್ಟ್ರಕವಿ ಗೌರವವನ್ನು ಅರ್ಪಿಸಲಾಯಿತು. ಈ ಎಲ್ಲಾ ಗೌರವಗಳೂ ಹಿಮಾಚಲ ಭಾರವಾಗಬಹುದಾದವು. ಆದರೆ ಹೂ ಹಗುರವಾಗಿ ಅವರನ್ನು ಅಲಂಕರಿಸಿದವು. ಹಲವು ವರ್ಷಗಳ ‘ಉದಯರವಿ’ಯಲ್ಲಿನ ಅವರ ತಪೋಜೀವನವನ್ನು ಅಂತ್ಯಗೊಳಿಸಿದ ಈ ಮಹಾನ್ ವಿಶ್ವಮಾನವರು ನವೆಂಬರ್ 10, 1994ರಂದು ಈ ಲೋಕವನ್ನಗಲಿದರು.
(ಆಧಾರ: ಪ್ರಭುಶಂಕರ ಅವರು ಕುವೆಂಪು ಕುರಿತು ಬರೆದಿರುವ ‘ಸಾಲು ದೀಪಗಳು’ ಕೃತಿಯಲ್ಲಿನ ಬರಹ)
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
Wednesday, June 12, 2019
2 months ago
ಅದೊಂದು ಕಾಲವಿತ್ತು, ನಮ್ಮ ಭೂಮಿಯ ಸುತ್ತ ಸೂರ್ಯನು ಸುತ್ತುತ್ತಿದ್ದಾನೆ, ನಮ್ಮ ಭೂಮಿಯ ಮೇಲಿರುವ ನಾವುಗಳೆಲ್ಲಾ ದೇವರು ಎಂದು ನಂಬಿದ್ದಂತಹ ಕಾಲವದು. ಆದರೆ 1543 ರಲ್ಲಿ “ನಿಕೋಲಾಸ್ ಕೊಪೆರ್ನಿಕಸ್” ಎನ್ನುವ ವ್ಯಕ್ತಿಯು ಸೂರ್ಯನ ಸುತ್ತ ಭೂಮಿ ಹಾಗು ಕೆಲ ಗ್ರಹಗಳು ಸುತ್ತುತ್ತಿವೆ ಎಂದು ನಿರೂಪಿಸಿದನು. ಇದನ್ನು ಕೇಳಿದ ಅದೆಷ್ಟೋ ಜನರು ಅವನೊಬ್ಬ ಹುಚ್ಚ ಎಂದು ಆಡಿಕೊಂಡು ನಕ್ಕಿದ್ದರು. ಆದರೆ ಸಮಯ ಕಳೆದಂತೆ ಅವನ ಮಾತುಗಳು ಸತ್ಯ ಎಂದು ಜಗತ್ತಿಗೆ ತಿಳಿಯಲು ಶುರುವಾಯಿತು. ಆಗಲೇ ನೋಡಿ ಮನುಷ್ಯನಿಗೆ ನಮ್ಮ ಸೌರಮಂಡಲದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಹುಟ್ಟಿದ್ದು. ಒಂದೊಂದಾಗಿ ಸೌರ ಮಂಡಲದ ಒಳಗಿರುವ ಗ್ರಹಗಳ ಬಗ್ಗೆ ಅಧ್ಯಯನ ಮಾಡುತ್ತಾ ಹೋದ ಮನುಷ್ಯನು ನಮ್ಮ ಹಾಗೆ ಬೇರೆ ಜೀವಿಗಳು ಇರುವರೇ ಎಂದು ಹುಡುಕಲು ಶುರು ಮಾಡಿದ. ಈ ಹುಡುಕಾಟದಲ್ಲಿ ಸೂರ್ಯ ಹಾಗು ಅವನ ಸುತ್ತ ಸುತ್ತುತ್ತಿರುವ ಗ್ರಹಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡುತ್ತಾ ಅಚ್ಚರಿ ಸಂಗತಿಗಳನ್ನು ಕಲೆಹಾಕತೊಡಗಿದ. ಇಂದು ನಿಮಗೆ ಇಲ್ಲಿಯವರೆಗೂ ಕಲೆಹಾಕಿರುವ ಆ ಅಚ್ಚರಿ ಸಂಗತಿಗಳ ಬಗ್ಗೆ ತಿಳಿಸುತ್ತೇವೆ. ಮುಂದೆ ಓದಿ.
ಸೂರ್ಯ – Sun
ನಮ್ಮ ಸೌರ ಮಂಡಲದ ಹೃದಯ ಭಾಗವಾಗಿರುವ ಸೂರ್ಯನು 4.5 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಆಕಾಶಗಂಗೆಯ “ಒರಿಯನ್ ಸ್ಪರ್” ಎನ್ನುವ ಭಾಗದಲ್ಲಿ ಸೃಷ್ಟಿಯಾದನು. ಬಲವಾದ ಗುರುತ್ವಾಕರ್ಷಣೆ ಹಾಗು ಕಾಂತೀಯ ಕ್ಷೇತ್ರ ಹೊಂದಿರುವ ಸೂರ್ಯನನ್ನು 6 ಪದರಗಳಾಗಿ ವಿಂಗಡಿಸಿ ಅಧ್ಯಯನ ಮಾಡಲಾಗಿದೆ. ಆ ಆರು ಪದರಗಳು ಈ ರೀತಿ ಇದೆ “ಕೊರೋನ, ಕ್ರೋಮೋಸ್ಪಿಯರ್, ಫೋಟೋಸ್ಫಿಯರ್, ಕನ್ವೆಕ್ಟಿವ್ ಜೋನ್, ರೇಡಿಯೇಟಿವ್ ಜೋನ್ ಹಾಗು ಕೋರ್”. ಶೇಕಡ 91 ರಷ್ಟು ಹೈಡ್ರೋಜೆನ್, 8.9 ರಷ್ಟು ಹೀಲಿಯಂ ಹಾಗು ಶೇಕಡ 0.1 ರಷ್ಟು ಇಂಗಾಲ ಮತ್ತು ನೈಟ್ರೋಜನ್ ಅನಿಲಗಳಿಂದ ತುಂಬಿರುವ ಸೂರ್ಯನು ಸುಡುವ ಬೆಂಕಿಯ ಉಂಡೆಯಾಗಿದ್ದಾನೆ. ಬರೋಬ್ಬರಿ ಒಂದುಕೋಟಿ ಹದಿನೈದು ಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಸೂರ್ಯನ ಕೋರ್ ಭಾಗದಲ್ಲಿ ಹೈಡ್ರೋಜನ್ ಅಣುಗಳು ಜೊತೆಗೂಡಿ ಹೀಲಿಯಮ್ ಅನಿಲವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ವಿಕಿರಣ, ವಿದ್ಯುತ್ ಹಾಗು ಸೋಲಾರ್ ಗಾಳಿ ಉತ್ಪತ್ತಿಯಾಗಿ ಭೂಮಿಯ ಮೇಲೆ ಹೊಸ ಜೀವಿ ಸೃಷ್ಟಿಯಾಗಲು ಕಾರಣವಾಗುತ್ತಿದೆ. ಸೂರ್ಯನು ಅದೆಷ್ಟು ದೊಡ್ಡ ನಕ್ಷತ್ರವೆಂದರೆ ಭೂಮಿಯ ಹಾಗೆ ಇರುವ ಇನ್ನೂ 13 ಲಕ್ಷ ಭೂಮಿಗಳನ್ನು ಅದರ ಒಳಗೆ ಹಿಡಿಸಬಹುದಾಗಿದೆ.ಇಷ್ಟೊಂದು ದೊಡ್ಡ ಗಾತ್ರದಲ್ಲಿರುವ ಸೂರ್ಯನ ಗುರುತ್ವಾಕರ್ಷಣೆ ನಮ್ಮ ಸೌರ ಮಂಡಲದಲ್ಲಿರುವ ಎಲ್ಲಾ ಗ್ರಹಗಳನ್ನು ನಿರ್ಧಿಷ್ಟ ಜಾಗದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತಿದೆ. ಅಕಸ್ಮಾತ್ ಸೂರ್ಯನು ಇಲ್ಲವಾದಲ್ಲಿ ನಮ್ಮ ಸೌರ ಮಂಡಲದ ಎಲ್ಲಾ ಗ್ರಹ ನಕ್ಷತ್ರಗಳು ಗುರುತ್ವಾಕರ್ಷಣೆ ಕಳೆದುಕೊಂಡು ಚಿಲ್ಲಾ ಪಿಲ್ಲಿಯಾಗಿ ಎಲ್ಲೆಡೆ ಬೀಳುತ್ತವೆ. ಇದೇ ಕಾರಣಕ್ಕೆ ಸೂರ್ಯನು ನಮ್ಮ ಸೌರಮಂಡಲದ ಹೃದಯ ಎಂದು ಕರೆದಿರುವುದು.
2. ಮರ್ಕ್ಯುರಿ – Mercury
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತ್ಯಂತ ಚಿಕ್ಕ ಗ್ರಹ. ಸೂರ್ಯನಿಂದ 36 ಮಿಲಿಯನ್ ಮೈಲಿಗಳಷ್ಟು ದೂರದಲ್ಲಿರುವ ಈ ಗ್ರಹದ ಉಷ್ಣಾಂಶವು ಬೆಳಗಿನ ಜಾವ 427 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ಸಮಯದಲ್ಲಿ -273 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 4880 ಕಿಲೋಮೀಟರ್ ಸುತ್ತಳತೆ ಹೊಂದಿರುವ ಈ ಗ್ರಹವನ್ನು “ಕೋರ್, ಮ್ಯಾನ್ಟಲ್ ಹಾಗು ಕ್ರಸ್ಟ್” ಎನ್ನುವ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಗ್ರಹದ ಇನ್ನೊಂದು ವಿಶೇಷತೆ ಏನೆಂದರೆ ಸೂರ್ಯನ ಸುತ್ತ ಸುತ್ತಲು ಕೇವಲ 88 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಪ್ರತಿ 88 ದಿನಕ್ಕೊಮ್ಮೆ ಇಲ್ಲಿ ಹೊಸ ವರ್ಷ ಬರುತ್ತದೆ.
3. ಶುಕ್ರ ಗ್ರಹ – Venus
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ. ಮರ್ಕುರಿ ಗ್ರಹದ ನಂತರ ಇರುವ ಈ ಗ್ರಹದಲ್ಲಿ ಅನೇಕ ಜ್ವಾಲಾಮುಖಿ ಪರ್ವತಗಳಿದ್ದು ಭೂಮಿಯ ಸುತ್ತಳತೆಯನ್ನೇ ಈ ಗ್ರಹವೂ ಕೂಡ ಹೊಂದಿದೆ. ಭೂಮಿಗೆ ಹಾಗು ಶುಕ್ರ ಗ್ರಹಕ್ಕೆ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಈ ಗ್ರಹದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿದ್ದು ಇದರಿಂದ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ. ಇದರಿಂದಲೇ ಈ ಗ್ರಹದ ಉಷ್ಣಾಂಶ ಬರೋಬ್ಬರಿ 471 ಡಿಗ್ರಿ ಸೆಲ್ಸಿಯಸ್ ಇದೆ. ನಮ್ಮ ಸೌರ ಮಂಡಲದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಗ್ರಹವಿದು. ಈ ಗ್ರಹದ ಮೇಲೆ “ಮ್ಯಾಕ್ಸ್ವೆಲ್ ಮೊಂಟಾಸ್” ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಅದರ ಎತ್ತರ ಮೌಂಟ್ ಎವರೆಸ್ಟ್ ನಷ್ಟು ಇದೆ. ಈ ಗ್ರಹದ ಮೇಲೆ ಸಲ್ಫೂರಿಕ್ ಆಸಿಡ್ ಮಳೆ ಆಗುವುದಲ್ಲದೆ ಘಂಟೆಗೆ 224 ಮೈಲಿಗಳಷ್ಟು ವೇಗದಲ್ಲಿ ಬೀಸುವ ಬಿರುಗಾಳಿಗಳು ಈ ಗ್ರಹದ ತುಂಬೆಲ್ಲ ಇದೆ. ವಿಜ್ಞ್ಯಾನಿಗಳ ಪ್ರಕಾರ 2.9 ಬಿಲಿಯನ್ ವರ್ಷಗಳ ಹಿಂದೆ ಈ ಗ್ರಹದ ಮೇಲೆ ಭೂಮಿಯ ಮೇಲೆ ಇರುವ ವಾತಾವರಣ ಇತ್ತಂತೆ. ಅಂದರೆ ಈ ಗ್ರಹದ ಮೇಲೆ ಕೂಡ ಜೀವಿಗಳು ಜೀವಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ಗ್ರಹವನ್ನು ಅಧ್ಯಯನ ಮಾಡಲೆಂದು ಕಳುಹಿಸಿದ ಸ್ಯಾಟಲೈಟ್ಗಳು ಅಲ್ಲಿಯ ವಾತಾವರಣಕ್ಕೆ ಸಿಕ್ಕು ಸುಟ್ಟು ಭಸ್ಮವಾಗಿರುವುದು ಒಂದು ದುರಂತದ ಸಂಗತಿ.
4. ಭೂಮಿ – Earth
ಶುಕ್ರ ಗ್ರಹದ ನಂತರ ಇರುವ ನಮ್ಮ ಈ ಭೂಮಿಯು ಸಂಪೂರ್ಣ ಸೌರಮಂಡಲದಲ್ಲಿಯೇ ಜೀವಿಗಳಿಗೆ ವಾಸಿಸಲು ಯೋಗ್ಯವಾಗಿರುವ ಏಕೈಕ ಗ್ರಹ. 4.53 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾದ ಈ ನಮ್ಮ ಭೂಮಿಯು ನೀರನ್ನು ಹೊಂದಿರುವ ಏಕೈಕ ಗ್ರಹವಾಗಿದೆ. ಸೂರ್ಯನಿಂದ 149.6 ಮಿಲಿಯನ್ ಕಿಲೋಮೀಟರ್ ಗಳಷ್ಟು ದೂರವಿರುವ ಈ ನಮ್ಮ ಭೂಮಿಯು ಅನೇಕ ಜೀವಿಗಳಿಗೆ ಆಶ್ರಯ ನೀಡಿದೆ. 3.5 ಬಿಲಿಯನ್ ವರ್ಷಗಳ ಹಿಂದೆ ಈ ಗ್ರಹದ ಮೇಲೆ ಜೀವಿಗಳು ಸೃಷ್ಟಿಯಾಗಿದ್ದು ಅಂದಿನಿಂದ ಇಂದಿನವರೆಗು ಸಾಕಷ್ಟು ಬದಲಾವಣೆಯಾಗುವುದರೊಂದಿಗೆ ಅನೇಕ ಜೀವಿಗಳು ಜನ್ಮ ತಾಳಿವೆ. ಆದರೆ ಭೂಮಿಯ ಮೇಲೆ ಮರಗಳು ಭೂಮಿ ಸೃಷ್ಟಿಯಾದ ನಂತರ ತತ್ಕ್ಷಣ ಹುಟ್ಟಿಕೊಳ್ಳಲಿಲ್ಲ. ಸರಿಯಾಗಿ 465 ಮಿಲಿಯನ್ ವರ್ಷಗಳ ಹಿಂದೆ ಮರಗಳು ಈ





